Tuesday, July 28, 2026
spot_imgspot_img
spot_imgspot_img

ಉಡುಪಿ: ಮಗುವನ್ನು ಆಡಿಸುತ್ತಿದ್ದ ವೇಳೆ ಕೈ ಜಾರಿ ಕೆಳಗೆ ಬಿದ್ದ ಮಗು; ಗಂಭೀರ ಗಾಯ

- Advertisement -
- Advertisement -
vtv vitla

ಹೆಬ್ರಿ : ಎರಡೂವರೆ ವರ್ಷದ ಮಗುವನ್ನು ಎತ್ತಿ ಆಡಿಸುವ ವೇಳೆ ಕೈಯಿಂದ ಜಾರಿ ಬಿದ್ದು ಮಗುವಿನ ಎಡಕಿವಿಯ ಬಳಿ ಗಂಭೀರ ಗಾಯಗೊಂಡ ಘಟನೆ ಹೆಬ್ರಿ ಪೊಲೀಸ್ ಠಾಣೆಯ ಶಿವಪುರ ಗ್ರಾಮದ ಜನತಾ ಕಾಲೋನಿಯಲ್ಲಿ ನಡೆದಿದೆ.

ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಶಿವಪುರ ಗ್ರಾಮದ ಮುಳ್ಳುಗುಡ್ಡೆಯ ಜನತಾಕಾಲೋನಿ ಎಂಬಲ್ಲಿ ಶಕುಂತಲಾ ಹಾಗೂ ಕೃಷ್ಣ ಎಂಬ ದಂಪತಿಗೆ ಎರಡೂವರೆ ವರ್ಷ ಪ್ರಾಯದ ಸಾಕ್ಷಿ ಹಾಗೂ 6 ತಿಂಗಳ ಹೆಣ್ಣು ಮಕ್ಕಳೊಂದಿಗೆ ವಾಸವಾಗಿದ್ದರು.

ಕಾರ್ಯಕ್ರಮವೊಂದರ ನಿಮಿತ್ತ ಮನೆಗೆ ಬಂದ ಸಂಬಂಧಿ ರಾಜು ಎಂಬುವವರು ರಾತ್ರಿ 8:00 ಗಂಟೆಗೆ ಮನೆಯ ಛಾವಡಿಯಲ್ಲಿ ಸಾಕ್ಷಿಯನ್ನು ಎತ್ತಿ ಅಡಿಸುತ್ತಿದ್ದರು.

ಈ ವೇಳೆ ಏಕಾಏಕಿ ಕೈಯಿಂದ ಜಾರಿದ ಮಗು ನೆಲಕ್ಕೆ ಬಿದ್ದಿದೆ. ಪರಿಣಾಮ ಮಗುವಿನ ಎಡಕಿವಿಯ ಬಳಿ ತೀವ್ರ ಸ್ವರೂಪದ ಗಾಯವಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!