Monday, June 8, 2026
spot_imgspot_img
spot_imgspot_img

ಉಡುಪಿ : ಲಾರಿ ಬೈಕ್‌ಗೆ ಡಿಕ್ಕಿ; ಸವಾರ ಮೃತ್ಯು

- Advertisement -
- Advertisement -

ಉಡುಪಿ : ಲಾರಿಯೊಂದು ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಹಿರಿಯಡ್ಕ ಕುಕ್ಕೆ ಹಳ್ಳಿ ರಸ್ತೆಯ ನಾಗಬನ ಬಳಿ ನಡೆದಿದೆ.

ಮೃತರನ್ನು ಕುಕ್ಕೆ ಹಳ್ಳಿಯ ರಾಘವೇಂದ್ರ ನಾಯ್ಕ್ ಎಂದು ಗುರುತಿಸಲಾಗಿದೆ. ಸಹಸವಾರ ಕುಕ್ಕೆಹಳ್ಳಿಯ ಬಚ್ಚ ನಾಯ್ಕ್ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಾಲಕ ಜಗದೀಶ್ ಲಾರಿಯನ್ನು ರಸ್ತೆಯ ಉಬ್ಬಿನಲ್ಲಿ ಏಕಾಏಕಿ ಯಾವುದೇ ಸೂಚನೆಯನ್ನು ನೀಡದೆ ಹಿಮ್ಮುಖವಾಗಿ ಚಲಾಯಿಸಿಕೊಂಡು ಬಂದು ಹಿರಿಯಡ್ಕ ಕಡೆಯಿಂದ ಬರುತ್ತಿದ್ದ ಬೈಕ್‌ಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ.

ಇದರಿಂದ ಗಂಭೀರವಾಗಿ ಗಾಯಗೊಂಡ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!