Thursday, May 2, 2024
spot_imgspot_img
spot_imgspot_img

ಉಡುಪಿ: ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸ್ಕಾರ್ಪ್ ವಿವಾದ.? ಧಾರ್ಮಿಕ ತಾರತಮ್ಯ.! ಕ್ಯಾಂಪಸ್ ಫ್ರಂಟ್ ಖಂಡನೆ

- Advertisement -G L Acharya panikkar
- Advertisement -
vtv vitla
vtv vitla

ಉಡುಪಿ : ಉಡುಪಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿದ ಕಾರಣ ಅವರನ್ನು ತರಗತಿಯಿಂದ ಹೊರ ಹಾಕಲಾಗಿತ್ತು. ಸರಕಾರಿ ಬಾಲಕಿಯರ ಕಾಲೇಜಿನಲ್ಲಿ ತರಗತಿಯಲ್ಲಿ ಹಿಜಾಬ್ ನಿರ್ಬಂಧ ವಿಚಾರಕ್ಕೆ ಸಂಬಂಧಿಸಿದಂತೆ ಕಾಲೇಜು ಪ್ರಾಂಶುಪಾಲ ರುದ್ರೇಗೌಡ ಅವರು ಪ್ರತಿಕ್ರಿಯೆ ನೀಡಿದ್ದು, ವಿಧ್ಯಾರ್ಥಿಗಳ ಐಡೆಂಟಿಗೆ ಈ ನಿಯಮ ಮಾಡಲಾಗಿದ್ದು, ಇದನ್ನು ಎಲ್ಲರೂ ಪಾಲಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಆರು ಮಂದಿ ವಿಧ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿ ಪ್ರವೇಶಕ್ಕೆ ನಿರ್ಬಂಧಿ ವಿದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ ಕಾಲೇಜು ಪ್ರಾಂಶುಪಾಲ ರುದ್ರೇಗೌಡ ವಿಧ್ಯಾರ್ಥಿನಿಯರಿಗೆ ತರಗತಿವರೆಗೂ ಹಿಜಾಬ್ ಧರಿಸಲು ಅನುಮತಿ ಇದೆ ಆದರೆ ತರಗತಿಯೊಳಗೆ ಹಿಜಾಬ್ ಸ್ಕಾರ್ಫ್ ಹಾಕೋಹಾಗಿಲ್ಲ, ವಿಧ್ಯಾರ್ಥಿನಿಯರ ಐಡೆಂಟಿಗೆ ಈ‌ ನಿಯಮ ಮಾಡಲಾಗಿದೆ. ಕಳೆದ ಮೂರು ದಿನಗಳಿಂದ ಆರು ಮಂದಿ ವಿದ್ಯಾರ್ಥಿನಿಯರು ಸ್ಕಾರ್ಪ್ ಹಾಕುತ್ತಿದ್ದಾರೆ, ಆದರೆ ಕಾಲೇಜು ನಿಯಮ ಶಿಸ್ತು ಹಾಗೂ ಸಮಾನತೆಗೆ ಒತ್ತು ನೀಡಿದೆ. ಸ್ಕಾರ್ಫ್ ಹಾಕಿ ಇನ್ಯಾರೋ ತರಗತಿಗೆ ಬರುವಂತಾಗಬಾರದು, ನಮ್ಮ ಕಾಲೇಜು ವಿದ್ಯಾರ್ಥಿನಿ ಎಲ್ಲೆಲ್ಲೋ ತಿರುಗಾಡಿ ಅನಾಹುತ ಮಾಡಿಕೊಳ್ಳಬಾರದು, ಹೀಗಾಗಿ ಸ್ಕಾರ್ಫ್ ಬೇಡ ಹೇಳುತ್ತಿದ್ದೇವೆ. ಈವರೆಗೂ ಇಲ್ಲದ ವಿರೋಧ ಈ ಆರು ವಿದ್ಯಾರ್ಥಿನಿಯರಿಂದ ಬರುತ್ತಿದೆ.

ಕ್ಯಾಂಪಸ್ ಫ್ರಂಟ್ ಖಂಡನೆ;

ಒಂದು ಮುಸ್ಲಿಂ ಮಹಿಳೆಗೆ ಹಿಜಾಬ್ ಧರಿಸುವುದು ಅವರ ಧಾರ್ಮಿಕ ನಂಬಿಕೆಗಳಲ್ಲಿ ಒಂದಾಗಿದೆ ಆದರೆ ಈ ಹಕ್ಕನ್ನು ಅವರಿಂದ ಕಸಿದುಕೊಳ್ಳಲಾಗುತ್ತಿದೆ. ಕಾಲೇಜಿನಲ್ಲಿ ಮುಸ್ಲಿಂ ಧರ್ಮವನ್ನು ಅಭ್ಯಸಿಸುವಾಗ ಅದನ್ನು ತಡೆಯಲಾಗತ್ತದೆ ಆದರೆ ಸಹೋದರ ಧರ್ಮದ ಪೂಜೆ ಹಾಗೂ ಇನ್ನಿತರ ಕಾರ್ಯಕ್ರಮಕ್ಕೆ ತಡೆ ಇಲ್ಲದೆ ಅದನ್ನು ಶಿಕ್ಷಕರ ನೇತೃತ್ವದಲ್ಲಿ ಮಾಡಲಾಗುತ್ತದೆ. ಇಂತಹ ಧಾರ್ಮಿಕ ತಾರತಮ್ಯವು ನಡೆಯುತ್ತಿದೆ. ಕುರಿತು ddp ಗೆ ಪತ್ರವನ್ನು ನೀಡಲಾಗಿತ್ತು ಅಲ್ಲಿ ಅವರು ಈ ಸಮಸ್ಯೆಗೆ ಪರಿಹಾರ ನೀಡುತ್ತಾರೆ ಎಂದು ಭರವಸೆ ನೀಡಿದ್ದರು. ಆದರೆ ಇವತ್ತು ಪುನಃ ಆ ವಿದ್ಯಾರ್ಥಿನಿಯರನ್ನು ಇದೇ ಕಾರಣಕ್ಕೆ ತರಗತಿಯಿಂದ ಹೊರ ಹಾಕಿದ್ದಾರೆ. ನಮ್ಮ ಬೇಡಿಕೆ ಏನೆಂದರೆ ಅಲ್ಲಿಯ ಪ್ರಾಂಶುಪಾಲರನ್ನು ಅಮಾನತುಗೊಳಿಸಬೇಕು ಎಂದು ಕ್ಯಾಂಪಸ್ ಫ್ರಂಟ್ ಆಗ್ರಹಿಸಿದ್ದಾರೆ.

- Advertisement -

Related news

error: Content is protected !!