Sunday, September 20, 2026
spot_imgspot_img
spot_imgspot_img

ಉಡುಪಿ: ಸಾಲ ಬಾಧೆ ತಾಳಲಾರದೆ ವ್ಯಕ್ತಿ ಆತ್ಮಹತ್ಯೆ

- Advertisement -
- Advertisement -

ಉಡುಪಿ: ಮನೆ ಕಟ್ಟಲು ಮಾಡಿದ ಸಾಲ ತೀರಿಸಲು ಸಾಧ್ಯವಾಗುತ್ತಿಲ್ಲ ಎಂಬ ಆತಂಕದಿಂದ ವ್ಯಕ್ತಿಯೊಬ್ಬರು ಮದ್ಯಕ್ಕೆ ವಿಷ ಸೇವಿಸಿ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಡುಬಿದ್ರೆಯ ಪೂಂದಾಡು ದರ್ಕಾಸ್ತಿನಲ್ಲಿ ನಡೆದಿದೆ. ಪೂಂದಾಡು ದರ್ಕಾಸ್ತು ನಿವಾಸಿ ಅಶೋಕ ವಿ. ಮೂಲ್ಯ (39) ಮೃತ ದುರ್ದೈವಿ.

ಅಶೋಕ್ ಮೂಲ್ಯ ಕೂಲಿ ಕೆಲಸ ಮಾಡಿಕೊಂಡಿದ್ದು, ಅವರು ಪೆರ್ಡೂರು ಗ್ರಾಮದ ಜೋಗಿಬೆಟ್ಟುವಿನಲ್ಲಿ ಜಾಗ ಖರೀದಿ ಮಾಡಿ ಮನೆ ಕಟ್ಟುವ ಸಲುವಾಗಿ ಬ್ಯಾಂಕಿನಿಂದ ಸುಮಾರು 6 ಲಕ್ಷ ರೂ. ಸಾಲ ಪಡೆದಿದ್ದರು. ಅರ್ಧದಷ್ಟು ಮನೆಯ ಕಾಮಗಾರಿ ಮುಗಿಸಿದ್ದು, ಕೊರೊನಾ ಕಾರಣದಿಂದ ಬ್ಯಾಂಕಿನ ಸಾಲ ಮರುಪಾವತಿ ಮಾಡಲು ಸಾಧ್ಯವಾಗಿರಲಿಲ್ಲ. ಇದರಿಂದ ಬ್ಯಾಂಕಿನವರು ಮನೆ ಮತ್ತು ಜಾಗವನ್ನು ಸ್ವಾಧೀನಪಡಿಸಿಕೊಂಡಿದ್ದರು.

- Advertisement -

Related news

error: Content is protected !!