Monday, April 29, 2024
spot_imgspot_img
spot_imgspot_img

ಬದಿಯಡ್ಕ : ಎದೆಹಾಲು ಕುಡಿಯುವಾಗ ಉಸಿರುಕಟ್ಟಿ ನವಜಾತ ಶಿಶು ಮೃತ್ಯು

- Advertisement -G L Acharya panikkar
- Advertisement -

ಬದಿಯಡ್ಕ : ತಾಯಿಯ ಎದೆಹಾಲು ಕುಡಿಯುವಾಗ ಉಸಿರುಕಟ್ಟಿ ನವಜಾತ ಶಿಶು ಸಾವಿಗೀಡಾಗಿದ ಹೃದಯ ವಿದ್ರಾವಕ ಘಟನೆ ಬದಿಯಡ್ಕದಲ್ಲಿ ವರದಿಯಾಗಿದೆ. ಎದೆಹಾಲು ಗಂಟಲಲ್ಲಿ ಸಿಲುಕಿ ಉಕ್ಕಿನಡ್ಕ ನಿವಾಸಿಗಳಾದ ಅಬ್ದುಲ್‌ ರಹ್ಮಾನ್‌-ತಾಹಿರಾ ದಂಪತಿಯ 25 ದಿನದ ಹಸುಗೂಸು ಸಾವಿಗೀಡಾಗಿದೆ.

ಫೆ. 16ರಂದು ಮಗುವಿಗೆ ಎದೆ ಹಾಲು ಉಣಿಸುತ್ತಿದ್ದಾಗ ಹಾಲು ಗಂಟಲಲ್ಲಿ ಸಿಲುಕಿಕೊಂಡು ಮಗು ಅಸ್ವಸ್ಥಗೊಂಡಿತು. ಕೂಡಲೇ ಮಗುವನ್ನು ಬದಿಯಡ್ಕ ಸರಕಾರಿ ಆಸ್ಪತ್ರೆಗೆ ಆ ಬಳಿಕ ಕಾಸರಗೋಡು ಜನರಲ್‌ ಆಸ್ಪತ್ರೆಗೂ ತಲುಪಿಸಿದರೂ ಜೀವ ರಕ್ಷಿಸಲು ಸಾಧ್ಯವಾಗಲಿಲ್ಲ. ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!