Monday, June 15, 2026
spot_imgspot_img
spot_imgspot_img

ಉಡುಪಿ: ಸ್ಕೂಟರ್‌-ಬೈಕ್‌ ಮುಖಾಮುಖಿ ಡಿಕ್ಕಿ; ಯುವಕ ಮೃತ್ಯು..!!

- Advertisement -
- Advertisement -

ಉಡುಪಿ: ಸ್ಕೂಟರ್ ಹಾಗೂ ಬೈಕ್ ನಡುವೆ ಅಪಘಾತ ನಡೆದು ಯುವಕ ಸಾವನ್ನಪ್ಪಿರುವ ಘಟನೆ ಬ್ರಹ್ಮಾವರದ ಯಡ್ತಾಡಿ ಗ್ರಾಮದ ಮಹಾತ್ಮಾ ಗಾಂಧಿ ಪ್ರೌಢ ಶಾಲೆಯ ಬಳಿ ನಡೆದಿದೆ.

ಮೃತರನ್ನು ಹೈಕಾಡಿಯ ಮುಹಮ್ಮದ್ ಸಫ್ವಾನ್ ಎ.ಕೆ.(27) ಎನ್ನಲಾಗಿದೆ. ಸ್ಕೂಟರ್ ಸವಾರ ಭುಜಂಗ ಶೆಟ್ಟಿ (68) ಎಂಬವರು ತೀವ್ರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಿನ್ನೆ ಬೆಳಗ್ಗೆ 9:45ರ ಸುಮಾರಿಗೆ ಹಾಲಾಡಿ ಮಾರ್ಗವಾಗಿ ಸಾಯಿಬರಕಟ್ಟೆ ಕಡೆಯಿಂದ ಬ್ರಹ್ಮಾವರದ ಕಡೆಗೆ ಹೋಗುತ್ತಿದ್ದ ಬೈಕಿಗೆ ಬ್ರಹ್ಮಾವರ ಕಡೆಯಿಂದ ಸಾಯಿಬರಕಟ್ಟೆ ಕಡೆಗೆ ಬರುತ್ತಿದ್ದ ಸ್ಕೂಟರ್‌ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಮತ್ತು ಸ್ಕೂಟರ್ ಸವಾರಿಬ್ಬರೂ ವಾಹನಗಳ ಸಮೇತ ರಸ್ತೆಯ ಮೇಲೆ ಬಿದ್ದು ಗಾಯಗೊಂಡಿದ್ದಾರೆ. ಇಬ್ಬರನ್ನು ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮುಹಮ್ಮದ್ ಸಲ್ಮಾನ್ ತಡರಾತ್ರಿ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ತಿಳಿದು ಬಂದಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!