Thursday, April 25, 2024
spot_imgspot_img
spot_imgspot_img

ಉತ್ತಮ ಸಮಾಜ ಸೇವಾ ಪ್ರಶಸ್ತಿಗೆ ಪಾತ್ರರಾದ ಕಲ್ಲಡ್ಕದ ಉದ್ಯಮಿ ರಾಜೇಂದ್ರ ಎನ್. ಹೊಳ್ಳ

- Advertisement -G L Acharya panikkar
- Advertisement -

ಕೆ.ಟಿ ಹೋಟೇಲ್ ಸಂಸ್ಥಾಪಕ ಲಕ್ಷ್ಮೀ ನಾರಾಯಣ ಹೊಳ್ಳ ಅವರ ಹಿರಿಯ ಮಗ ನರಸಿಂಹ ಹೊಳ್ಳ, ಅವರ ಹಿರಿಯ ಮಗ ರಾಜೇಂದ್ರ ಎನ್. ಹೊಳ್ಳ ಇವರು ಕಲ್ಲಡ್ಕ ಪರಿಸರದಲ್ಲಿ 2005ರಲ್ಲಿ ನೂತನವಾಗಿ ಲಕ್ಷ್ಮೀ ಗಣೇಶ್ ಎಂಬ ಹೆಸರಿನಲ್ಲಿ ಹೋಟೆಲ್‌ ಉದ್ಯಮ ಪ್ರಾರಂಭಿಸಿ, ತನ್ನತಾತ ನೀಡಿದ ಬ್ರಾಂಡ್ “ಕೆ.ಟಿ”ಯನ್ನು ತನ್ನ ಹೋಟೆಲ್‌ನಲ್ಲಿ ಮುಂದುವರೆಸಿಕೊಂಡು ಜನಮನ್ನಣೆಗಳಿಸಿದರು.

ಕಳೆದ 12 ವರ್ಷಗಳಿಂದ ಹಲವಾರು ಸೇವಾ ಕಾರ್ಯಗಳಲ್ಲಿ ತೊಡಗಿಕೊಂಡು ರಾಜೇಂದ್ರ ಎನ್. ಹೊಳ್ಳ ಇವರು ದೇವಸ್ಥಾನ, ಚರ್ಚ್, ಮಸೀದಿ, ಮಂದಿರ, ದೈವಸ್ಥಾನ ಹೀಗೆ ಹಲವಾರು ಧಾರ್ಮಿಕ ಕೇಂದ್ರಗಳಿಗೆ ದೇಣಿಗೆ ನೀಡಿ, ಸೇವಾ ಕಾರ್ಯದಲ್ಲಿ ಕೈ ಜೋಡಿಸಿದ್ಧಾರೆ. ಹಲವಾರು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಹಾಗೂ ಉನ್ನತ ಶಿಕ್ಷಣ ವಿದ್ಯಾಭ್ಯಾಸ ಎಂ.ಕಾಂ, ಎಂ.ಎಸ್ಸಿ, ಎಂ.ಸಿ.ಎ ಅಲ್ಲದೆ ಪದವಿ ವಿದ್ಯಾರ್ಥಿಗಳಿಗೆ ಸಂಪೂರ್ಣ ವಿದ್ಯಾಬ್ಯಾಸದ ವಿದ್ಯಾನಿಧಿ ನೀಡಿದ್ದಾರೆ.

ಸುತ್ತ ಮುತ್ತಲಿನ ಎಲ್ಲಾ ಶಾಲಾ ಕಾಲೇಜುಗಳು, ಸರಕಾರಿ ಅಥವಾ ಖಾಸಗಿ ಶಿಕ್ಷಣ ಸಂಸ್ಥೆಗಳಿಗೂ ದೇಣಿಗೆ ನೀಡುವುದಲ್ಲದೆ, ಕುದ್ರೆಬೆಟ್ಟು ಎಂಬಲ್ಲಿನ ಸರಕಾರಿ ಶಾಲೆಗೆ ಓರ್ವ ಶಿಕ್ಷಕಿಯನ್ನು ನೇಮಿಸಿ ಅವರ ಸಂಭಾವನೆಯನ್ನುಕೂಡ ಇವರೇ ನೀಡುತ್ತಿದ್ದಾರೆ. ಮನೆಕಟ್ಟಲು, ಆಶ್ರಮ, ಹಿರಿಯ ಜೀವಿಗಳು, ಅನಾರೋಗ್ಯ ಪೀಡಿತರಿಗೆ ಧನ ಸಹಾಯ ಮತ್ತುಆಹಾರ ಸರಬರಾಜು ಮಾಡಿ ಸೇವೆ ಮಾಡುತ್ತಿದ್ದಾರೆ. ಹಾಗೇಯೇ ಜೀವನದಲ್ಲಿ ಕಷ್ಟ ಎಂದು ಬಂದವರ ಕಣ್ಣೀರು ಒರಸಿ, ತಾನು ದುಡಿದ ಸಂಪಾದನೆಯಲ್ಲಿಅವರಿಗೂ ನೀಡಿ ತನ್ನಖುಷಿಯ ಜೀವನವನ್ನು ಪತ್ನಿ ಪದ್ಮಾವತಿ ಆರ್. ಹೊಳ್ಳ, ಮಗ ಪವನ್‌ಕುಮಾರ್ ಹೊಳ್ಳ ಮತ್ತು ಮಗಳು ಪವಿತ್ರ ಹೊಳ್ಳ ಅವರೊಂದಿಗೆ ನಡಸುತ್ತಿದ್ದಾರೆ. ಇವರು ಸೇವಾ ಕಾರ್ಯಕ್ಕೆ ಸದಾ ಸಾತ್ ನೀಡುತಿದ್ದಾರೆ. ಇವರನ್ನು ಗುರುತಿಸಿದ ಕನ್ನಡ ಪಾಕ್ಷಿಕ ಪತ್ರಿಕೆ ಕ್ರೈಂ ಫೈಲ್‌ ತನ್ನ ೧೦ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನಿಯರಿಗೆ ಸನ್ಮಾನ ನೀಡಿ ಗೌರವಿಸಿದವರಲ್ಲಿ ಇವರು ಓರ್ವರು. ಇವರಿಗೆ ಉತ್ತಮ ಸಮಾಜ ಸೇವಕ ಪ್ರಶಸ್ತಿ ಹಾಗೂ ಸನ್ಮಾನ ನೀಡಿ ಗೌರವಿಸಿದ್ದಾರೆ.

- Advertisement -

Related news

error: Content is protected !!