Friday, April 26, 2024
spot_imgspot_img
spot_imgspot_img

ಉಪ್ಪಿನಂಗಡಿ: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ; ಆರೋಪಿಯ ವಿರುದ್ಧ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು..!

- Advertisement -G L Acharya panikkar
- Advertisement -

ಪುತ್ತೂರು: ಅಪ್ರಾಪ್ತ ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯ ವಿರುದ್ಧ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಸಮೀಪದ ಪುತ್ತಿಲ ಗ್ರಾಮದ ಮಹಿಳೆಯೊಬ್ಬರು ಪುತ್ತೂರು ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾರೆ. ಆರೋಪಿಯನ್ನು ಬೆಳ್ತಂಗಡಿ ತಾಲೂಕಿನ ಕಳಂಜಿಬೈಲ್ ನಿವಾಸಿ ನಾಸೀರ್ ಅಲಿಯಾಸ್ ಸುನಾಮಿ ನಾಸೀರ್ ಎನ್ನಲಾಗಿದೆ.

vtv vitla

ಘಟನೆಯ ವಿವರ:
ಜ.06 ರಂದು ದೂರುದಾರ ಮಹಿಳೆಯ ಅಪ್ರಾಪ್ತ ಮಗಳು ಮನೆಯ ಹೊರಗೆ ನಿಂತುಕೊಂಡಿದ್ದ ವೇಳೆ ಆರೋಪಿ ನಾಸೀರ್ ಆಕೆಯ ಬಳಿ ಬಂದು 500 ರೂ. ನೋಟು ಹಾಗೂ ಮೊಬೈಲ್ ನೀಡಿ ಆಕೆಯನ್ನು ತಬ್ಬಿ ಅಸಭ್ಯವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ.

ಈ ವೇಳೆ ದೂರುದಾರ ಮಹಿಳೆ ಅಲ್ಲಿಗೆ ಬಂದಾಗ ಆಕೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಗಳನ್ನು ಮದುವೆ ಮಾಡಿಕೊಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಈ ವೇಳೆ ದೂರುದಾರ ಮಹಿಳೆ ಕಿರುಚಿದಾಗ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.

vtv vitla
vtv vitla
vtv vitla

ದೂರುದಾರ ಮಹಿಳೆ ಬಾತ್ ರೂಮ್ ಗೆ ಹೋಗಿದ್ದು, ಈ ವೇಳೆ ಬಾತ್ ರೂಮ್ ನ ಕಿಟಕಿಯಿಂದ ಯಾರೋ ಮೊಬೈಲ್ ನಲ್ಲಿ ರೆಕಾರ್ಡ್ ಮಾಡುತ್ತಿರುವುದು ಕಂಡುಬಂದಿದೆ. ಈ ವೇಳೆ ದೂರುದಾರ ಮಹಿಳೆ ಕಿರುಚಿದ್ದು, ಆಗ ಮರೆಯಲ್ಲಿ ನಿಂತಿದ್ದ ಆರೋಪಿ ನಾಸಿರ್ ಮಹಿಳೆಯ ಮುಂದೆಯೇ ಓಡಿ ಹೋಗಿದ್ದಾನೆ ಎನ್ನಲಾಗಿದೆ. ಸಂತ್ರಸ್ತ ಮಹಿಳೆ ಹಾಗೂ ಅಪ್ರಾಪ್ತ ಬಾಲಕಿ ಪುತ್ತೂರು ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದು, ಆರೋಪಿಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!