Monday, October 26, 2026
spot_imgspot_img
spot_imgspot_img

ಕಾಸರಗೋಡು: ಚಲಿಸುವ ರೈಲಿನಲ್ಲಿ ದೃಷ್ಟಿಹೀನ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನ – ಆರೋಪಿಯ ಬಂಧನ

- Advertisement -
- Advertisement -

ಕಾಸರಗೋಡು: ಚಲಿಸುವ ರೈಲಿನಲ್ಲಿ ದೃಷ್ಟಿಹೀನ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಆರೋಪದ ಮೇಲೆ ಕರ್ನಾಟಕ ಮೂಲದ ಯುವಕನೊಬ್ಬನನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಕರ್ನಾಟಕದ ನಿವಾಸಿ ಅಯ್ಯಪ್ಪ (23) ಎಂದು ಗುರುತಿಸಲಾಗಿದೆ.

ಮುಂಬೈನ ಲೋಕಮಾನ್ಯ ತಿಲಕ್ ಟರ್ಮಿನಸ್‌ಗೆ ತೆರಳುತ್ತಿದ್ದ ವಿಶೇಷ ರೈಲಿನ ವಿಕಲಚೇತನರ ಬೋಗಿಯಲ್ಲಿ ರವಿವಾರ ಮುಂಜಾನೆ ಈ ಘಟನೆ ನಡೆದಿದ್ದು, ಎರ್ನಾಕುಳಂನಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ, ತನ್ನ ಒಂಬತ್ತು ವರ್ಷದ ಮಗನೊಂದಿಗೆ ಮನೆಗೆ ಮರಳುತ್ತಿದ್ದ 49 ವರ್ಷದ ಮಹಿಳೆ ದೌರ್ಜನ್ಯಕ್ಕೆ ಒಳಗಾದವರು. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೋಝಿಕ್ಕೋಡ್ ನಿಲ್ದಾಣ ದಾಟಿದ ಬಳಿಕ ವಿಕಲಚೇತನರ ಬೋಗಿಯಲ್ಲಿ ಮಹಿಳೆ ಮತ್ತು ಅವರ ಮಗ ಮಾತ್ರ ಇದ್ದರು ಎನ್ನಲಾಗಿದೆ. ಕಣ್ಣೂರಿನಿಂದ ರೈಲು ಹತ್ತಿದ್ದ ಆರೋಪಿ, ರೈಲು ಪಯ್ಯನ್ನೂರು ತಲುಪುತ್ತಿದ್ದಂತೆ ಮಹಿಳೆಯ ಮೇಲೆ ಹಲ್ಲೆ ನಡೆಸಿ, ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ, ಮಹಿಳೆಯನ್ನು ಸೀಟಿನಿಂದ ಕೆಳಕ್ಕೆ ತಳ್ಳಿ, ಅವರ ಮುಖ ಮತ್ತು ಕುತ್ತಿಗೆಯನ್ನು ಬಲವಾಗಿ ಹಿಸುಕಿದ್ದಾನೆ ಎನ್ನಲಾಗಿದೆ. ಈ ವೇಳೆ ಮಹಿಳೆ ತೀವ್ರವಾಗಿ ಪ್ರತಿರೋಧ ಒಡ್ಡಿದ್ದಾರೆ.

ತಾಯಿ ಅಪಾಯದಲ್ಲಿರುವುದನ್ನು ಗಮನಿಸಿದ ಒಂಬತ್ತು ವರ್ಷದ ಬಾಲಕ, ತಾಯಿಯ ಸೂಚನೆಯಂತೆ ರೈಲಿನ ತುರ್ತು ಸರಪಳಿಯನ್ನು ಎಳೆದು ರೈಲನ್ನು ನಿಲ್ಲಿಸಿದ್ದಾನೆ. ರೈಲು ನಿಲ್ಲುತ್ತಿದ್ದಂತೆ ಆರೋಪಿ ಪಕ್ಕದ ಬೋಗಿಗೆ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.

ರೈಲ್ವೆ ಸಿಬ್ಬಂದಿಯಿಂದ ಮಾಹಿತಿ ಪಡೆದ ಕಾಸರಗೋಡು ರೈಲ್ವೆ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!