Thursday, May 2, 2024
spot_imgspot_img
spot_imgspot_img

ಉಳ್ಳಾಲ: ಆಟೋ ರಿಕ್ಷಾದಲ್ಲಿ ಅಕ್ರಮ ಗೋಮಾಂಸ ಸಾಗಾಟ; ಚಾಲಕ ವಶಕ್ಕೆ

- Advertisement -G L Acharya panikkar
- Advertisement -

ಕೇರಳ ಭಾಗದಿಂದ ಮಂಗಳೂರಿಗೆ ಅಕ್ರಮವಾಗಿ ದನದ ಮಾಂಸ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಆಟೋ ಸಹಿತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೊಣಾಜೆ ಪೊಲೀಸರು ಅಸೈಗೋಳಿಯಲ್ಲಿ ರಿಕ್ಷಾವನ್ನು ತಡೆದು‌ ನಿಲ್ಲಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಕೇರಳ ಮೂಲದ ರಿಯಾಝ್ (32) ಬಂಧಿತ ಆರೋಪಿ.

365 ಕೆ.ಜಿ ದನದ ಮಾಂಸವನ್ನು ಕೇರಳದಿಂದ ಮಂಗಳೂರು ಭಾಗದಲ್ಲಿ ಮಾರಾಟ ಮಾಡಲು ಸಾಗಿಸುತ್ತಿದ್ದ. ಈ ಬಗ್ಗೆ ಮಾಹಿತಿ ಪಡೆದ ಕೊಣಾಜೆ ಪೊಲೀಸರು ಅಸೈಗೋಳಿ ಬಳಿ ಅಟೋ ರಿಕ್ಷಾವನ್ನು‌ತಡೆದು ನಿಲ್ಲಿಸಿ ಪರಿಶೀಲಿಸಿದಾಗ ದನದ ಮಾಂಸ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!