Thursday, May 9, 2024
spot_imgspot_img
spot_imgspot_img

ಉಳ್ಳಾಲ: ಪಿಲಾರು ಪಳ್ಳ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷ; ಸ್ಥಳೀಯರಲ್ಲಿ ಆತಂಕ.!

- Advertisement -G L Acharya panikkar
- Advertisement -

ಮ0ಗಳೂರು: ಸೋಮೇಶ್ವರ ಪುರಸಭಾ ವ್ಯಾಪ್ತಿಯ ಕುಂಪಲ, ಪಿಲಾರು ಪಳ್ಳ ಪ್ರದೇಶದಲ್ಲಿ ಚಿರತೆ ಸಂಚರಿಸುವುದನ್ನ ವ್ಯಕ್ತಿಯೋರ್ವರು ಪ್ರತ್ಯಕ್ಷ ಕಂಡಿದ್ದು ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.

ಕುಂಪಲ ಬಾಲಕೃಷ್ಣ ಮಂದಿರ, ಸರಳಾಯ ಕಾಲನಿಯಲ್ಲಿ ಎರಡು ದಿವಸಗಳ ಹಿಂದೆಯೇ ಚಿರತೆ ಸಂಚರಿಸುತ್ತಿದ್ದ ಬಗ್ಗೆ ಸುದ್ದಿಯಾಗಿತ್ತು. ನಿನ್ನೆ ರಾತ್ರಿ ಕುಂಪಲ ಸಮೀಪದ ಪಿಲಾರು ಪಳ್ಳ ಎಂಬ ಗುಡ್ಡ ಪ್ರದೇಶದಲ್ಲಿ ವ್ಯಕ್ತಿಯೋರ್ವರು ಚಿರತೆಯನ್ನ ಕಣ್ಣಾರೆ ಕಂಡಿದ್ದು ಸ್ಥಳೀಯರಲ್ಲಿ ಆತಂಕ ಇನ್ನಷ್ಟು ಹೆಚ್ಚುಮಾಡಿದೆ.

ಪಿಲಾರು ಪಳ್ಳ ನಿವಾಸಿ ಶಿವರಾಜ್ ಪೊಣ್ಣು ಸ್ವಾಮಿ ಎಂಬವರು ನಿನ್ನೆ ರಾತ್ರಿ 9.30 ಗಂಟೆ ಸುಮಾರಿಗೆ ತನ್ನ ಮನೆಯಿಂದ ಮಗಳ ಮನೆಗೆ ತೆರಳುತ್ತಿದ್ದ ವೇಳೆ ಮನೆಯ ಬಳಿಯೇ ಚಿರತೆಯೊಂದು ರಸ್ತೆ ದಾಟಿ ಪೊದೆಯೊಳಗೆ ನುಗ್ಗಿದನ್ನ ಕಣ್ಣಾರೆ ಕಂಡಿದ್ದಾರೆ. ಅದರ ಉದ್ದನೆಯ ಬಾಲ ಮತ್ತು ಬಣ್ಣವನ್ನ ಕಂಡು ಸಣ್ಣ ಗಾತ್ರದ ಚಿರತೆಯೆಂದು ಮನದಟ್ಟು ಮಾಡಿದ್ದಾರೆ. ನಿನ್ನೆ ರಾತ್ರಿ ಮಳೆ ಸುರಿದುದರಿಂದ ಚಿರತೆಯ ಹೆಜ್ಜೆ ಗುರುತು ಮಾಸಿದೆ. ಪ್ರತ್ಯಕ್ಷ ಸಾಕ್ಷಿ ದೊರೆತ್ತಿದ್ದು ಸ್ಥಳೀಯರಲ್ಲಿ ಇನ್ನಷ್ಟು ಆತಂಕ ಹೆಚ್ಚಿದೆ.

- Advertisement -

Related news

error: Content is protected !!