Sunday, May 5, 2024
spot_imgspot_img
spot_imgspot_img

ಉಳ್ಳಾಲ : ಬಾವಿ ಕಟ್ಟೆ ಮೇಲೆ ಕುಳಿತುಕೊಳ್ಳುತ್ತೀರಾ ಹುಷಾರ್..! ನಿದ್ರೆ ಮಂಪರಿನಲ್ಲಿ ಬಾವಿಯೊಳಗೆ ಬಿದ್ದು ವೃದ್ದ ಮೃತ್ಯು

- Advertisement -G L Acharya panikkar
- Advertisement -

ಉಳ್ಳಾಲ: ನಿದ್ರೆ ಮಂಪರಿನಲ್ಲಿದ್ದ ವೃದ್ಧರೋರ್ವರು ಬಾವಿಯೊಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ತೊಕ್ಕೊಟ್ಟು ಸಮೀಪದ ಕಲ್ಲಾಪು ಎಂಬಲ್ಲಿ ನಡೆದಿದೆ.

ಘಟನೆ ದೃಶ್ಯ ಮನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಲ್ಲಾಪು ನಿವಾಸಿ ವಾಲ್ಟರ್ ಮೊಂತೆರೋ (65) ಮೃತ ದುರ್ದೈವಿ. ವಾಲ್ಟರ್ ಶನಿವಾರ ಸಂಜೆ ತೊಕ್ಕೊಟ್ಟಿನ ಚರ್ಚ್‌ಗೆ ತೆರಳಿ ಪೂಜೆಯಲ್ಲಿ ಪಾಲ್ಗೊಂಡು ಮನೆಗೆ
ರಾತ್ರಿ 7.23 ರ ಹೊತ್ತಿಗೆ ವಾಲ್ಟರ್ ಅವರು ಮನೆಯಂಗಳದ ಬಾವಿಯ ಕಟ್ಟೆಯಲ್ಲಿ ನಿದ್ರೆಯ ಮಂಪರಲ್ಲಿ ಕುಳಿತಿದ್ದಾಗ ಹಠಾತ್ತಾಗಿ ಉರುಳಿ ಬಾವಿಯೊಳಗೆ ಬಿದ್ದಿದ್ದಾರೆ.

ಕೂಡಲೇ ಮನೆಮಂದಿ ಆಳ ಇಲ್ಲದ ಬಾವಿಗೆ ಏಣಿ ಇಳಿಸಿ ವಾಲ್ಟರ್ ಅವರನ್ನು ಮೇಲಕ್ಕೆತ್ತಿದ್ದು ತಲೆಗೆ ಗಂಭೀರಗೊಂಡ ಪರಿಣಾಮ ಸಾವನ್ನಪ್ಪಿದ್ದಾರೆ. ಘಟನೆಯ ದೃಶ್ಯಾವಳಿ ಮನೆಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.

- Advertisement -

Related news

error: Content is protected !!