Thursday, July 30, 2026
spot_imgspot_img
spot_imgspot_img

ಹೋಟೆಲ್ ನಲ್ಲಿ ಊಟ ಖಾಲಿಯಾಗಿದೆ ಎಂದಿದ್ದಕ್ಕೆ ಮಾಲೀಕನಿಗೆ ಚಾಕುವಿನಿಂದ ಇರಿತ!

- Advertisement -
- Advertisement -

ಬೆಂಗಳೂರು: ಊಟ ಖಾಲಿ ಆಗಿದೆ ಎಂದು ಹೇಳಿದ್ದಕ್ಕೆ ಹೊಟೆಲ್ ಮಾಲೀಕನಿಗೆ ಚಾಕುವಿನಿಂದ ಇರಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ನಡೆದಿದೆ. ಆರೋಪಿಯನ್ನು ರೌಡಿಶೀಟರ್ ಯಲ್ಲಪ್ಪ ಎಂದು ಗುರುತಿಸಲಾಗಿದೆ.

ಹೋಟೆಲ್ ಮಾಲೀಕ ಚಂದ್ರಶೇಖರ್‌ ಚಾಕು ಇರಿತಕ್ಕೆ ಒಳಗಾದವರು. ಗಾಯಾಳು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರೌಡಿಶೀಟರ್ ಯಲ್ಲಪ್ಪ ರಾತ್ರಿ 10 ಗಂಟೆಯ ನಂತರ ಮದ್ಯದ ಬಾಟಲಿ ಹಿಡಿದು ಸಿಗರೇಟು ಸೇದುತ್ತಾ ಹೋಟೆಲ್ ಗೆ ಬಂದಿದ್ದ. ಊಟ ಖಾಲಿ ಆಗಿದೆ ಎಂದಿದ್ದಕ್ಕೆ ಚಾಕು ಇರಿದು ಅಟ್ಟಹಾಸ ಮೆರೆದಿದ್ದ. ಈತ 2 ತಿಂಗಳಿಂದಷ್ಟೇ ಜೈಲಿನಿಂದ ಹೊರ ಬಂದಿದ್ದ ರೌಡಿಶೀಟರ್ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಬಗ್ಗೆ ದೊಡ್ಡಬಳ್ಳಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!