Saturday, June 6, 2026
spot_imgspot_img
spot_imgspot_img

ಊಟ ಮಾಡಿ ಕೈತೊಳೆಯುವಾಗಲೇ ಬಂದೆರಗಿದ ಯಮರಾಜ; ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿನಿ ಮೃತ್ಯು

- Advertisement -
- Advertisement -

ಊಟ ಮಾಡಿ ಕೈತೊಳೆಯುವಾಗಲೇ ಯುವತಿ ಪ್ರಾಣ ಚೆಲ್ಲಿದ ಹೃದಯವಿದ್ರಾವಕ ಘಟನೆ ನಡೆದಿದೆ. ಈ ದುರಂತ ಬಳ್ಳಾರಿ ಜಿಲ್ಲೆಯ ಬಂಡಿಹಟ್ಟಿ ಬಳಿ ನಡೆದಿದೆ.

ಊಟ ಮಾಡಿ ಕೈತೊಳೆಯಲು ಹೋದ ಮರುಕ್ಷಣದಲ್ಲೇ ಈ ಯುವತಿ ಪ್ರಾಣ ಕಳೆದುಕೊಂಡಿದ್ದಾಳೆ. ಕೈ ತೊಳೆಯಲು ಹೋದಾಗ ಜಾರಿ ಕಾಲುವೆಗೆ ಬಿದ್ದು 18 ವರ್ಷದ ಲಾವಣ್ಯ ಸಾವಿಗೀಡಾದ ಯುವತಿ. ಈಕೆ ಬಳ್ಳಾರಿಯ ಹಾನಗಲ್ ಕುಮಾರಸ್ವಾಮಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು.

ಕಾಲೇಜು ಮುಗಿದ ಬಳಿಕ ಇಲ್ಲಿನ ಬಂಡಿಹಟ್ಟಿ ಕಾಲುವೆ ಸಮೀಪ ಊಟ ಮಾಡಿ ಕೈ ತೊಳೆಯಲು ಹೋದಾಗ ದುರಂತ ಸಂಭವಿಸಿದೆ. ಜಾರಿ ಕಾಲುವೆಗೆ ಬಿದ್ದ ಯುವತಿ ಪ್ರಾಣ ಕಳೆದುಕೊಂಡಿದ್ದಾಳೆ. ಕೌಲಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!