- Advertisement -
- Advertisement -

ಧಾರವಾಡ: ವರದಕ್ಷಿಣೆ ಕಿರುಕುಳ ಆರೊಪದ ಮೇಲೆ ಪತಿಯೇ ಪತ್ನಿಯನ್ನು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಘಟನೆ ಹುಬ್ಬಳ್ಳಿಯ ರಾಘವೇಂದ್ರ ಕಾಲೋನಿಯಲ್ಲಿ ನಡೆದಿದೆ.
ಮಂಜುಳಾ ಗಂಜಿಗಟ್ಟಿ (30) ಮೃತ ದುರ್ದೈವಿ. ವರದಕ್ಷಿಣೆ ಕಿರುಕುಳ ನೀಡಿ ಪತಿಯಿಂದಲೇ ಪತ್ನಿ ಹತ್ಯೆ ಮಾಡಿರುವ ಆರೋಪ ಕೇಳಿ ಬಂದಿದೆ. ಪತಿ ಕರಿಬಸಪ್ಪ ಹಾಗೂ ಕುಂಬದವರಿಂದ ತಮ್ಮ ಮಗಳನ್ನು ವರದಕ್ಷಿಣೆ ನೀಡುವಂತೆ ಕಿರುಕುಳ ನೀಡಿ ಹತ್ಯೆ ಮಾಡಿದ್ದಾರೆ ಎಂದು ಮೃತಳ ಹೆತ್ತವರಿಂದ ಆರೋಪ ಕೇಳಿ ಬಂದಿದೆ. ಎರಡು ತಿಂಗಳ ಹಿಂದಷ್ಟೇ ಮದುವೆಯಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ.





- Advertisement -