Friday, May 3, 2024
spot_imgspot_img
spot_imgspot_img

ಎರುಂಬು: ವಿಜೃಂಭಣೆಯಿಂದ ನಡೆದ ಶ್ರೀ ಕೃಷ್ಣ ಜನ್ಮಾಷ್ಠಮಿಯ ಆಟೋಟ ಸ್ಪರ್ಧೆಗಳು

- Advertisement -G L Acharya panikkar
- Advertisement -
astr

ವಿಟ್ಲ: ಶ್ರೀ ದಿವ್ಯಜ್ಯೋತಿ ಮಿತ್ರವೃಂದದ 2022ರ ಶ್ರೀಕೃಷ್ಣ ಜನ್ಮಾಷ್ಠಮಿಯ ಆಟೋಟ ಸ್ಪರ್ಧೆಗಳು ದಿನಾಂಕ 28.08.2022ರಂದು ಎರುಂಬು ಶ್ರೀ ವಿಷ್ಣುಮಂಗಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಬಹಳ ವಿಜೃಂಭಣೆಯಿಂದ ಜರಗಿತು.

ಮುದ್ದು ಪುಟಾಣಿಗಳು, ಬಾಲಕ, ಬಾಲಕಿಯರು ಪುರುಷರು, ಮಹಿಳೆಯರೆಂಬ ವಿಭಾಗಗಳಲ್ಲಿ ವಿವಿಧ ಸ್ಪರ್ಧೆಗಳು ಬೇಧ – ಭಾವ ಮರೆತು ಸಾಮರಸ್ಯ, ಸೌಹಾರ್ದತೆಯಿಂದ ಜರಗಿತು. ಶ್ರೀ ವಿಷ್ಣುಮಂಗಲ ದೇವರಿಗೆ ಭಜನೆ ಹಾಗೂ ವಿಶೇಷ ಪೂಜೆ ಸಲ್ಲಿಸಿ, ಗೋಪಾಲ ಬೆಲ್ಚಪ್ಪಾಡ ಆಚಾರಪಟ್ಟವರು ಶ್ರೀ ಭಗವತಿ ಕ್ಷೇತ್ರ, ಶ್ರೀಕಲಾ ಬಾಲಕೃಷ್ಣ ಕಾರಂತ, ಸದಾನಂದ ಶೆಟ್ಟಿ ಎರುಂಬು, ಇವರ ಉಪಸ್ಥಿತಿಯಲ್ಲಿ ದೀಪ ಬೆಳಗಿಸಿ ಸ್ಪರ್ಧೆಗಳ ಉದ್ಘಾಟನೆ ಯನ್ನು ನೆರವೇರಿಸಲಾಯಿತು. ಇದು ಸ್ನೇಹ ಕೂಟ, ಶ್ರೀಕೃಷ್ಣನ ಜನ್ಮ ಹಾಗೂ ಅನುಗ್ರಹ ಪೂರಿತ ಬದುಕು ಕಲಿಯುಗದ ಜನರ ಸಂಘೆ ಶಕ್ತಿಗೆ ಮಾದರಿಯಾಗಿದೆ. ಭಿನ್ನತೆಯೇ ಆವರಿಸಿರುವ ಸಮಾಜಕ್ಕೆ ಸಾಮರಸ್ಯದ ಬದುಕಿನ ಅವಶ್ಯಕತೆ ಇದೆ, ಇದಕ್ಕೆ ಈ ಕಾರ್ಯಕ್ರಮ ಕೊಡುಗೆ ಕೊಡಲಿ ಎಂದು ಅಥಿತಿಗಳು ಆಯೋಜಕರ ಸಂಯೋಜನೆಯನ್ನು ಶ್ಲಾಘಸಿದರು.

ಸಂಘದ ಹಿರಿಯ ಕಾರ್ಯಕರ್ತ ಸಿ. ಯಚ್. ಸಂಜೀವ ಶೆಟ್ಟಿ, ಜೊತೆಗಿದ್ದು ಪ್ರೋತ್ಸಾಹಿಸಿದರು.ಹಿರಿಯ ಸಂಘಟಕ ವಸಂತ ಟೈಲರ್, ದಿವ್ಯಜ್ಯೋತಿ ಮಿತ್ರವೃಂದದ ಸಕ್ರಿಯ ಸದಸ್ಯ ದಿವ್ಯ ಧನುಷ್ ರೈ,ಅಧ್ಯಕ್ಷ ಜಯಪ್ರಕಾಶ್, ಕ್ರೀಡಾ ಕಾರ್ಯದರ್ಶಿ ಕೇಶವ ಕುಲಾಲ್, ನವೀನ್ ಕ್ರಮವಾಗಿ ನಿರೂಪಣೆ, ಸ್ವಾಗತ, ಧನ್ಯವಾದ ನೆರವೇರಿಸಿದರು. ಬೆಳಗ್ಗಿನಿಂದ ಸಂಜೆಯವರೆಗೂ ಊರ, ಪರವೂರ ಕ್ರೀಡಾಸಕ್ತರು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದರು.

ಸಂಜೆ ನಡೆದ ಸಮಾರೊಪ ಸಮಾರಂಭದಲ್ಲಿ ಅತಿಥಿಗಳಾಗಿ ವಿಷ್ಣುಮಂಗಲ ದೇವಸ್ಥಾನದ ಪ್ರಧಾನ ಆರ್ಚಕ ಬಾಲಕೃಷ್ಣ ಕಾರಂತ, ಪಂಚಾಯತ್ ಸದಸ್ಯೆ ಗಿರಿಜಾ ಬಿಟ್ಟಿಮೂಲೆ ಹಿರಿಯ ಕಾರ್ಯಕರ್ತರಾದ ಶ್ರೀ ಸಿ. ಯಚ್. ಸಂಜೀವ ಶೆಟ್ಟಿ,ಸದಾನಂದ ಶೆಟ್ಟಿ ಎರುಂಬು, ದಿವ್ಯಜ್ಯೋತಿ ಮಿತ್ರವೃಂದದ ಅಧ್ಯಕ್ಷ ಜಯಪ್ರಕಾಶ್, ಕ್ರೀಡಾ ಕಾರ್ಯದರ್ಶಿ ಕೇಶವ ಕುಲಾಲ್, ಸುಜ್ಞಾನ ಮಹಿಳಾ ಮಂಡಲದ ಅಧ್ಯಕ್ಷೆ ಶಾಲಿನಿ, ಭಾಗವಹಿಸಿ ಬಹುಮಾನ ವಿತರಿಸಲಾಯಿತು. ತೀರ್ಪುಗಾರರಾಗಿ ಸಹಕರಿಸಿದ ದೈಹಿಕ ಶಿಕ್ಷಕರಾದ ಸುರೇಶ್ ವೈ. ಯಸ್, ಶ್ರೀಮತಿ ನೀರಜ ಜನಾರ್ಧನ್, ಹಾಗೂ ಕೆ. ವಿ ಬಂಗೇರ ಮತ್ತು ಸವಿತ ಎರುಂಬು ಇವರನ್ನು ಗೌರವಿಸಲಾಯಿತು. ಅದ್ದೂರಿ ಆಟೋಟ ಸ್ಪರ್ಧೆಗಳ ಸವಿಯನ್ನು ಸರ್ವರೂ ಸಂಭ್ರಮಿಸಿದ ಈ ಕಾರ್ಯಕ್ರಮದ ನಿರೂಪಣೆಯಲ್ಲಿ ರಾಧಾಕೃಷ್ಣ ಎರುಂಬುರವರು ಸಹಕರಿಸಿದರು.

- Advertisement -

Related news

error: Content is protected !!