- Advertisement -
- Advertisement -



ಎಳನೀರು ಲಾರಿ ಹರಿದು ನಲವತ್ತಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಕುಣಿಗಲ್ ಸಮೀಪದ ಗವಿಮಠ ಬ್ರಿಡ್ಜ್ ಬಳಿ ಸಂಭವಿಸಿದೆ. ಮಡಕಶಿರಾ ತಾಲೂಕಿನ ಗುಡಿಬಂಡೆ ನಿವಾಸಿಯಾದ ರಂಗಮಾರಯ್ಯ, ದೊಡ್ಡ ಮಾರಪ್ಪ, ದೊಡ್ಡ ಈರಪ್ಪ, ಚಂದ್ರಪ್ಪ ಇತರರಿಗೆ ಸೇರಿದ ಎಂಟು ನೂರು ಕುರಿ ಮಂದೆಗಳನ್ನು ಮೇಯಿಸಲು ಕುಣಿಗಲ್ ಕಡೆ ಬಂದಿದ್ದರು.
ಗುರುವಾರ ರಾತ್ರಿ ಕುರಿಗಳನ್ನು ಹೊಡೆದುಕೊಂಡು ಹೋಗುತ್ತಿದ್ದರು. ಬೆಳಗಿನ ಜಾವ ಎಳನೀರು ಲಾರಿ ಕುರಿ ಮಂದೆ ಮೇಲೆ ಹರಿದಿದೆ. ಈ ವೇಳೆ ರಸ್ತೆಯಲ್ಲಿ ಹೋಗುತ್ತಿದ್ದ 40 ಕ್ಕಿಂತಲೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ. ಸುಮಾರು 35 ಕ್ಕಿಂತಲೂ ಹೆಚ್ಚು ಕುರಿಗಳು ಗಂಭೀರ ಗಾಯವಾಗಿದೆ. ಕುಣಿಗಲ್ ಗ್ರಾಮಾಂತರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

- Advertisement -








