Sunday, June 21, 2026
spot_imgspot_img
spot_imgspot_img

(ಎ. 8) ಕೆಲಿಂಜ ಹಿ.ಪ್ರಾ.ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳ ಸಮ್ಮಿಲನ; ಮಕ್ಕಳ ಪ್ರತಿಭಾ ಪುರಸ್ಕಾರ, ಕೆ.ಜಿ ಮಕ್ಕಳ ಅಭಿಯಾನ ಕಾರ್ಯಕ್ರಮ, 1ರಿಂದ 8ನೇ ತರಗತಿಗೆ ಸ್ಪೋಕನ್ ಇಂಗ್ಲೀಷ್ ಕಾರ್ಯಕ್ರಮ ಉದ್ಘಾಟನೆ

- Advertisement -
- Advertisement -

ವೀರಕಂಭ : ಕೆಲಿಂಜ ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳ ಸಮ್ಮಿಲನ, ಮಕ್ಕಳ ಪ್ರತಿಭಾ ಪುರಸ್ಕಾರ, ಕೆ.ಜಿ ಮಕ್ಕಳ ಅಭಿಯಾನ ಕಾರ್ಯಕ್ರಮ, 1ರಿಂದ 8ನೇ ತರಗತಿಗೆ ಸ್ಪೋಕನ್ ಇಂಗ್ಲೀಷ್ ಕಾರ್ಯಕ್ರಮ ಉದ್ಘಾಟನೆಯು ಎ. 8 ರಂದು ಸಂಜೆ 6.30 ರಿಂದ ಕೆಲಿಂಜ ಶಾಲಾ ರಂಗಮಂಟಪದಲ್ಲಿ ನಡೆಯಲಿದೆ.

ಎ. 8 ರಂದು ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕೆಲಿಂಜ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಪೆಲತ್ತಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಕಲ್ಲಡ್ಕ ಮತ್ತು ಕಂಬಳಬೆಟ್ಟು ಕ್ಲಸ್ಟರ್ ಸಿ.ಆರ್.ಪಿ ಜ್ಯೋತಿ, ಕೆಲಿಂಜ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಮುತ್ತಣ್ಣ ರೈ, ನಿವೃತ್ತ ಮುಖ್ಯ ಶಿಕ್ಷಕಿ ಪ್ರೇಮ, ನಿವೃತ್ತ ಸಹ ಶಿಕ್ಷಕ ಬಾಬು ಗೌಡ, ಹಳೆ ವಿದ್ಯಾರ್ಥಿ ಡಾ| ರವಿಕಿರಣ್ ಭಟ್ ಮೊಗಸಾಲೆ, ಹಳೆ ವಿದ್ಯಾರ್ಥಿ ಸರ್ಕಲ್ ಇನ್ಸ್‌ಪೆಕ್ಟರ್ ಕೆ.ಎಂ ರಫೀಕ್ , ಹಳೆ ವಿದ್ಯಾರ್ಥಿನಿ ವಕೀಲೆ ಚೇತನಾ ರಾಮಚಂದ್ರ ಶೆಟ್ಟಿ ದಂಡೆ, ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ಸುದೇಶ್ ಭಂಡಾರಿ, ರೋ.ಪ್ರಕಾಶ್ ನಾಯಕ್, ವಿಟ್ಲ ಜೇಸಿಐ ಅಧ್ಯಕ್ಷ ಜೇಸಿ ಪರಮೇಶ್ವರ ಹೆಗ್ಗಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ರಾತ್ರಿ 7.30ರಿಂದ ಕೆಲಿಂಜ ಹಾಗೂ ಮಂಗಲಪದವು ಅಂಗನವಾಡಿ ಮಕ್ಕಳಿಂದ ಪುಟ್ಟ ಹೆಜ್ಜೆ, ರಾತ್ರಿ 8ರಿಂದ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 9.30ಕ್ಕೆ ಭೋಜನ ವ್ಯವಸ್ಥೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!