Friday, May 3, 2024
spot_imgspot_img
spot_imgspot_img

ಐಎಎಸ್‌ ಮತ್ತು ಐಪಿಎಸ್‌ ಅಧಿಕಾರಿಗಳ ಜಡೆಜಗಳ; ಈ ಪೋಟೋಸ್‌ ಕೇವಲ ಸ್ಯಾಂಪಲ್ ಅಷ್ಟೆ- ಡಿ ರೂಪಾ ಬಳಿ ಇವೆಯಾ ಮತ್ತಷ್ಟು ಸ್ಫೋಟಕ ಸಾಕ್ಷ್ಯಾಧಾರಗಳು…?

- Advertisement -G L Acharya panikkar
- Advertisement -

ಬೆಂಗಳೂರು: ರೋಹಿಣಿ ಸಿಂಧೂರಿ ಮತ್ತು ಡಿ.ರೂಪ ಪೋಸ್ಟ್ ವಾರ್ ಮುಂದುವರೆದಿದೆ. ರೋಹಿಣಿ ಸಿಂಧೂರಿ ವಿರುದ್ಧ 19 ಆರೋಪಗಳ ಪಟ್ಟಿ ಪೋಸ್ಟ್ ಮಾಡಿದ್ದ ರೂಪ ಅವರು ಈಗ ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ರೋಹಿಣಿ ಸಿಂಧೂರಿ ಅವರ ಕೆಲವು ಖಾಸಗಿ ಫೋಟೋಗಳನ್ನು ಹರಿಬಿಟ್ಟಿದ್ದಾರೆ. ಆದರೆ, ಈಗ ಹಂಚಿಕೊಂಡಿರುವ ಫೋಟೋಗಳು ಸ್ಯಾಂಪಲ್ ಅಷ್ಟೇ ಎಂದು ಹೇಳುವ ಮೂಲಕ ಇನ್ನಷ್ಟು ದಾಖಲೆಗಳು ಇರುವ ಬಗ್ಗೆ ಐಜಿಪಿ ಡಿ.ರೂಪಾ ಸುಳಿವು ನೀಡಿದ್ದಾರೆ.

ರೋಹಿಣಿ ಸಿಂಧೂರಿ ರಾಜಿ ಸಂಧಾನಕ್ಕೆ ಹೋಗುವ ಅಗತ್ಯವೇನಿತ್ತು? IAS ಅಧಿಕಾರಿ ಆಗಿ ರಾಜಕಾರಣಿಗಳ ಬಳಿ ಸಂಧಾನಕ್ಕೆ ಯಾಕೆ ಹೋಗ್ಬೇಕು? ರೋಹಿಣಿ ಏನಾದರೂ ಭ್ರಷ್ಟಾಚಾರ, ಕರ್ತವ್ಯಲೋಪ ಎಸಗಿದ್ದರಾ? ಏನೋ ಮುಚ್ಚಿಡುವ ಕೆಲಸ ರೋಹಿಣಿ ಸಿಂಧೂರಿ ಮಾಡ್ತಿದ್ದಾರೆ. ನಾನು ಮಾಡಿದ ಎಲ್ಲಾ ಆರೋಪಗಳಿಗೆ ದಾಖಲೆ ಇದೆ. ಡಿ.ಕೆ.ರವಿ ಜತೆ ನಡೆಸಿದ್ದ ಸಿಂಧೂರಿ ವಾಟ್ಸಾಪ್​ ಚಾಟ್​ ನೋಡಿದ್ದೇನೆ. ಇಂತಹ ಅನೇಕ ವಿಚಾರಗಳು ನನ್ನ ಗಮನಕ್ಕೆ ಬಂದಿವೆ. ರೋಹಿಣಿ ನಡವಳಿಕೆಯ ಬಗ್ಗೆ ಸರ್ಕಾರದ ಗಮನಕ್ಕೆ ತಂದಿದ್ದೇನೆ.

ಅಧಿಕಾರಿಗಳಿಗೆ ಫೋಟೋ ಕಳುಹಿಸಿರುವ ದಾಖಲೆ ನನ್ನ ಬಳಿ ಇದೆ. ಒಬ್ಬ ಮಹಿಳೆ ಪುರುಷರಿಗೆ ಫೋಟೋ ಕಳುಹಿಸುತ್ತಾರೆ ಅಂದರೆ ಏನರ್ಥ? ಶಾಸಕರೊಬ್ಬರು ಐಎಎಸ್ ಅಧಿಕಾರಿ​ ವಿರುದ್ಧ ಆರೋಪ ಮಾಡಿದ್ದಾರೆ. ಆರೋಪ ಮಾಡಿದ ಶಾಸಕರ ಜತೆ ಸಂಧಾನಕ್ಕೆ ಹೋಗಿದ್ದು ಎಷ್ಟು ಸರಿ? ಶಾಸಕರ ಬಳಿ IAS​ ಅಧಿಕಾರಿ ಸಂಧಾನಕ್ಕೆ ಹೋಗಿದ್ದು ಇದೇ ಮೊದಲು ಎಂದು ಐಪಿಎಸ್​ ಅಧಿಕಾರಿ ಡಿ.ರೂಪಾ ರೋಹಿಣಿ ಸಿಂಧೂರಿ ವಿರುದ್ಧ ಆರೋಪಗಳ ಸುರಿಮಳೆ ಗೈದಿದ್ದಾರೆ.

ಡಿ. ರೂಪ ಅವರು ರೋಹಿಣಿ ಸಿಂಧೂರಿ ಅವರ ಕೆಲವು ಖಾಸಗಿ ಚಿತ್ರಗಳನ್ನು ಫೋಸ್ಟ್ ಮಾಡಿದ್ದು ಪ್ರಶ್ನೆಗಳನ್ನು ಮಾಡಿದ್ದಾರೆ. ಈ ರೀತಿಯ ಪಿಕ್ಚರ್ಸ್ ನಾರ್ಮಲ್‌ ಅನ್ನಿಸಬಹುದು. ಆದರೆ, ಒಬ್ಬ ಮಹಿಳಾ ಐಎಎಸ್ ಅಧಿಕಾರಿ ಮೂವರು ಐಎಎಸ್ ಪುರುಷ ಅಧಿಕಾರಿಗಳಿಗೆ ಆಗಾಗ ಇವುಗಳನ್ನು ಹಾಗೂ ಈ ರೀತಿಯ ಅನೇಕ ಪೋಟೋಗಳನ್ನು ಒನ್‌ ಟು ಒನ್‌ ಕಳಿಸುತ್ತಾರೆ ಅಂದರೆ ಅದಕ್ಕೆ ಏನರ್ಥ? ಇದು ಆಕೆಯ ಖಾಸಗಿ ವಿಷಯ ಆಗುವುದಿಲ್ಲ. ಐಎಎಸ್ ಸರ್ವೀಸ್‌ ಕಂಡಕ್ಟ್‌ ರೂಲ್ಸ್‌ ಪ್ರಕಾರ ಅಪರಾಧ. ರೋಹಿಣಿ ನಡವಳಿಕೆ ಬಗ್ಗೆ ಸರ್ಕಾರದ ಗಮನಕ್ಕೆ ತಂದಿದ್ದೇನೆ. ಈಗಾಗಲೇ ನಾನು ರೋಹಿಣಿ ವಿರುದ್ಧ ಮಾಡಿರುವ 19 ಆರೋಪಗಳ ಬಗ್ಗೆಯೂ ದಾಖಲೆಗಳಿವೆ. ಐಎಎಸ್‌ ಜವಾಬ್ದಾರಿಯುತ ಹುದ್ದೆಯಾಗಿದೆ. ಹೀಗಿರುವಾಗ ಸ್ಪಾ, ತಲೆ ದಿಂಬಿನ ಫೋಟೋ ಕಳುಹಿಸುತ್ತಾರೆ ಅಂದರೆ ಏನು ಅರ್ಥ? ಒಂದು ತಿಂಗಳ ಹಿಂದೆ ನನಗೆ ಫೋಟೋ ಸಿಕ್ಕಿದ್ದು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಈಗಾಗಲೆ ಸರ್ಕಾರದ ಎಲ್ಲರ ಗಮನಕ್ಕೆ ಬಂದಿದೆ. ಯಾವ ರೀತಿಯ ತನಿಖೆ ಆಗುತ್ತೆ ಅಂತಾ ಕಾದು ನೋಡ್ತೀನಿ ಎಂದು ಹೇಳಿದರು.

- Advertisement -

Related news

error: Content is protected !!