Thursday, May 16, 2024
spot_imgspot_img
spot_imgspot_img

ಇಬ್ಬರು ಶಂಕಿತ ಉಗ್ರರ ಬಂಧನ-ಬಂಧಿತರಿಂದ ಎರಡು ಸೆಮಿ ಆಟೋಮ್ಯಾಟಿಕ್​ ಪಿಸ್ತೂಲ್​ ಹಾಗೂ 10 ಜೀವಂತ ಗುಂಡುಗಳ ವಶ

- Advertisement -G L Acharya panikkar
- Advertisement -

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೋಮವಾರ ರಾತ್ರಿ ಇಬ್ಬರು ಶಂಕಿತ ಉಗ್ರರರನ್ನು ಪೊಲೀಸರು ಬಂಧಿಸಿದ್ದಾರೆ. ಎರಡು ಸೆಮಿ ಆಟೋಮ್ಯಾಟಿಕ್​ ಪಿಸ್ತೂಲ್​ ಹಾಗೂ 10 ಜೀವಂತ ಗುಂಡುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇಂದು ಮುಂಜಾನೆ ಸುದ್ದಿಗೋಷ್ಠಿ ನಡೆಸಿದ ಪೊಲೀಸರು ಈ ವಿಚಾರ ಬಹಿರಂಗಪಡಿಸಿದ್ದಾರೆ. ಬಂಧಿತರಿಬ್ಬರೂ ಕಾಶ್ಮೀರದವರು ಎಂದು ತಿಳಿದು ಬಂದಿದೆ. 22 ವರ್ಷದ ಅಬ್ದುಲ್​ ಲತಿಫ್​ ಕಾಶ್ಮೀರದ ಬರಾಮುಲ್ಲದವನಾಗಿದ್ದಾನೆ. 20 ವರ್ಷದ ಅಶ್ರಫ್​ ಖತಾನ ಕುಪ್ವಾರದವನಾಗಿದ್ದಾನೆ.

ಇಬ್ಬರು ಶಂಕಿತ ಉಗ್ರರರು ದೆಹಲಿ ಪ್ರವೇಶಿಸಿರುವ ಬಗ್ಗೆ ಗುಪ್ತಚರ ಇಲಾಖೆಯವರು ಮಾಹಿತಿ ನೀಡಿದ್ದರು. ಇದನ್ನು ಆಧರಿಸಿ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದರು. ನಂತರ ಇಬ್ಬರೂ ಅರೆಸ್ಟ್​ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು, ಇವರು ದೆಹಲಿಗೆ ಬಂದ ಉದ್ದೇಶ ಏನು? ಇವರು ಯಾವ ಉಗ್ರ ಸಂಘಟನೆಯವರು ಹಾಗೂ ಇವರ ಹಿಂದೆ ಯಾರೆಲ್ಲ ಇದ್ದಾರೆ ಎನ್ನುವ ಮಾಹಿತಿ ವಿಚಾರಣೆ ನಂತರವಷ್ಟೇ ಹೊರಬೀಳಬೇಕಿದೆ.

- Advertisement -

Related news

error: Content is protected !!