Monday, June 22, 2026
spot_imgspot_img
spot_imgspot_img

ಒಂಟಿ ಮನೆಯಲ್ಲಿ ವಾಸವಾಗಿದ್ದ ಮಹಿಳೆಯನ್ನು ಕಟ್ಟಿ ಹಾಕಿ ದರೋಡೆ ಮಾಡಿದ್ದ ಇಬ್ಬರು ಖತರ್ನಾಕ್ ಕಳ್ಳರು ಅಂದರ್!

- Advertisement -
- Advertisement -

ಬೆಂಗಳೂರು: ಒಂಟಿ ಮನೆಯಲ್ಲಿ ವಾಸವಾಗಿದ್ದ ಮಹಿಳೆಯನ್ನು ಕಟ್ಟಿ ಹಾಕಿ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಕೃತ್ಯ ನಡೆದ 24 ಗಂಟೆಯಲ್ಲಿ ಬೆಂಗಳೂರಿನ ಚಿಕ್ಕಜಾಲ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ದೊಡ್ಡಜಾಲದ ಒಂಟಿ ಮನೆಯಲ್ಲಿ ಮಹಿಳೆಯೊಬ್ಬರು ವಾಸವಾಗಿದ್ದರು. ರಾತ್ರಿ ವೇಳೆ ಮಹಿಳೆ ಮನೆಯ ಬಾಗಿಲು ತಟ್ಟಿದ ಖದೀಮರು ಕಳ್ಳತನ ನಡೆಸಿದ್ದರು. ಬಾಗಿಲು ತೆರೆದ ಮಹಿಳೆ ಮೇಲೆ ಹಲ್ಲೆ ಮಾಡಿದ್ದ ಆರೋಪಿಗಳು, ನಂತರ ಮಹಿಳೆಯ ಬಾಯಿಗೆ ಬಟ್ಟೆ ತುರುಕಿ ಕೈಕಾಲು ಕಟ್ಟಿ ಹಾಕಿದ್ದರು. ನಂತರ ಮನೆಯಲ್ಲಿದ್ದ ಚಿನ್ನಾಭರಣ, ನಗದು ಕದ್ದು ಎಸ್ಕೇಪ್ ಆಗಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಚಿಕ್ಕಜಾಲ ಪೊಲೀಸರು ಮಾಹಿತಿ ಬಂದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.

ಮಹಿಳೆಯ ಮಗಳು ವಿದೇಶದಲ್ಲಿ ವಾಸವಿದ್ದಾರೆ. ದೊಡ್ಡ ಮನೆಯಲ್ಲಿ ಮಹಿಳೆ ಒಂಟಿಯಾಗಿ ವಾಸವಿದ್ದರು. ಅದೇ ಊರಿನ ನಿವಾಸಿಯಾದ ರಾಕೇಶ್ ಮಹಿಳೆ ಬಗ್ಗೆ ಮಾಹಿತಿ ಪಡೆದು ತನ್ನ ಗೆಳೆಯನೊಂದಿಗೆ ಸೇರಿ ಕೃತ್ಯ ಎಸಗಿದ್ದಾನೆ. ಸದ್ಯ ಆರೋಪಿಗಳ ಬಂಧಿಸಿ ಚಿಕ್ಕಜಾಲ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!