- Advertisement -
- Advertisement -


ಮೈಸೂರು: ಒಂಭತ್ತು ತಿಂಗಳ ಹಸುಗೂಸನ್ನು ಯುವಕನ ಕೈಗೆ ಕೊಟ್ಟು ಅಪರಿಚಿತ ಮಹಿಳೆ ನಾಪತ್ತೆಯಾದ ಘಟನೆ ರಾಯಚೂರು ಬಸ್ ನಿಲ್ದಾಣದಲ್ಲಿ ನಡೆದಿದೆ.
ಮೈಸೂರಿನ ಹೆಚ್.ಡಿ ಕೋಟೆಯ ನಿವಾಸಿ ರಘು ಕೈಗೆ ಮಗು ಕೊಟ್ಟು ಮಹಿಳೆ ನಾಪತ್ತೆಯಾಗಿದ್ದಾರೆ. ಸದ್ಯ 9 ತಿಂಗಳ ಹಸುಗೂಸನ್ನು ರಘು ಬಾಲಮಂದಿರದ ವಶಕ್ಕೆ ನೀಡಿದ್ದಾರೆ.
ವೈಯಕ್ತಿಕ ಕೆಲಸಕ್ಕಾಗಿ ಹೆಚ್.ಡಿ.ಕೋಟೆಯ ನಿವಾಸಿ ರಘು ರಾಯಚೂರಿಗೆ ತೆರಳಿದ್ದರು. ಮೈಸೂರಿಗೆ ಹಿಂತಿರುಗಲು ರಾಯಚೂರು ಬಸ್ ಸ್ಟ್ಯಾಂಡ್ನಲ್ಲಿ ಮೈಸೂರು ಬಸ್ಸಿಗಾಗಿ ಕಾದು ಕುಳಿತಿದ್ದ ವೇಳೆ ಅಪರಿಚಿತ ಮಹಿಳೆ ಮಗುವನ್ನು ರಘು ಕೈಗೆ ನೀಡಿ ನಾಪತ್ತೆಯಾಗಿದ್ದಾರೆ.

ಮಗು ಕೊಟ್ಟು 3 ಗಂಟೆಯಾದರೂ ಮಹಿಳೆ ವಾಪಸ್ಸು ಬಂದಿಲ್ಲ . ಈ ಹಿನ್ನೆಲೆ ರಘು ಮಗು ಜೊತೆ ಮೈಸೂರಿಗೆ ಬಂದಿದ್ದಾರೆ. ಬಳಿಕ ರಘು ಮಗುವನ್ನು ರಕ್ಷಿಸಿ ಲಷ್ಕರ್ ಪೊಲೀಸ್ ಠಾಣೆಗೆ ನೀಡಿದ್ದಾರೆ. ಮಗುವಿನ ಆರೈಕೆ ಮಾಡಿದ ಸಿಬ್ಬಂದಿ ಮಗುವನ್ನು ಬಾಲಮಂದಿರದ ವಶಕ್ಕೆ ನೀಡಿದ್ದಾರೆ. ಮಗುವಿನ ತಾಯಿ ಪತ್ತೆಗೆ ರಾಯಚೂರು ಪೊಲೀಸರಿಗೆ ತಿಳಿಸಿದ್ದಾರೆ.


- Advertisement -








