Wednesday, May 1, 2024
spot_imgspot_img
spot_imgspot_img

ಕಟೀಲು ಮೇಳದ ರಂಗಸ್ಥಳದಲ್ಲಿ ದಲಿತ ಜಾತಿ ನಿಂದನೆ .!?; ಜಾತಿಯ ಹೆಸರನ್ನು ಅತ್ಯಂತ ಕೀಳು ಅರ್ಥ ಬರುವ ರೀತಿಯಲ್ಲಿ ವರ್ಣನೆ – ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

- Advertisement -G L Acharya panikkar
- Advertisement -
vtv vitla

ಮಂಗಳೂರು: ಕಳೆದ ಕೆಲವು ದಿನಳಿಂದ ಸಾಮಾಜಿಕ ಜಾಲತಾಣದಲ್ಲಿ ಕಟೀಲು ಮೇಳದ ಕಲಾವಿದರೊಬ್ಬರು ಹಿಂದುಳಿದ ವರ್ಗಕ್ಕೆ ಸೇರಿದ ದಲಿತರ ಜಾತಿ ನಿಂದನೆ ಮಾಡಿರುವ ವಿಡಿಯೋ ಒಂದು ವೈರಲ್ ಆಗುತ್ತಿದೆ.

ಖ್ಯಾತ ಯಕ್ಷಗಾನ ಕಲಾವಿದ ಸುಣ್ಣಂಬಳ ವಿಶ್ವೇಶ್ವರ ಭಟ್ ಅವರು ಬ್ರಾಹ್ಮಣನ ಪಾತ್ರ ಮಾಡಿದ್ದರೆ, ಡಾ ಮಹೇಶ್ ಸಾಣೂರು ಹೆಂಗಸಿನ ಪಾತ್ರ ಮಾಡಿ ಸಂಭಾಷಣೆಯ ಸಂದರ್ಭದಲ್ಲಿ ದಲಿತರಿಗೆ ಅಪಮಾನ ಆಗುವ ರೀತಿಯಲ್ಲಿ ಚಿತ್ರಿಸಿ ಅತ್ಯಂತ ಕೀಳು ಮಟ್ಟದಲ್ಲಿ ದಲಿತರ ಜಾತಿ ನಿಂದನೆಯನ್ನು ಮಾಡಿರುವುದು ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.

ಬ್ರಾಹ್ಮಣರಿಗೂ ಅಪಮಾನ :

ಇದೇ ವಿಡಿಯೋದಲ್ಲಿ ಬ್ರಾಹ್ಮಣರು ಪವಿತ್ರ ಎಂದು ಭಾವಿಸುವ ಜನಿವಾರವನ್ನು ತುಂಡರಿಸುವ ಹಾಗೂ ಕೆಟ್ಟ ರೀತಿಯಲ್ಲಿ ಚಿತ್ರಿಸಿ, ಸಮಾಜದಲ್ಲಿ ಬ್ರಾಹ್ಮಣರು ಕೆಟ್ಟವರು ಎಂಬುದಾಗಿ ತೋರಿಸುವ ಪ್ರಯತ್ನ ನಡೆದಂತೆ ಕಾಣುತ್ತಿದೆ ಎಂದು ಒಂದು ಕಡೆ ಟೀಕೆ ಕೇಳಿ ಬರುತ್ತಿದ್ದೆ. ಅದರಲ್ಲೂ ಸ್ವತಃ ಬ್ರಾಹ್ಮಣ ವರ್ಗಕ್ಕೆ ಸೇರಿದವರಾದ ಸುಣ್ಣಂಬಳ ವಿಶ್ವೇಶ್ವರ ಭಟ್ ಅವರೇ ಇಂತಹ ಪಾತ್ರ ಮಾಡಿರುವುದು ಯಕ್ಷಗಾನಾಭಿಮಾನಿಗಳಲ್ಲಿ ತೀವ್ರ ನೋವುಂಟು ಮಾಡಿರುವುದು ಎದ್ದು ಕಾಣುತ್ತದೆ. ಮತ್ತು ಉದ್ದೇಶ ಪೂರ್ವಕ ವಾಗಿಯೇ ಕಲಾವಿದರು ಈ ರೀತಿ ಮೇಲು ವರ್ಗ ಕೀಳು ವರ್ಗ ಎಂಬ ತಾರತಮ್ಯವನ್ನು ತರಲು ಮತ್ತು ಸಮಾಜವನ್ನು ಒಡೆಯಲು ಈ ರೀತಿ ಮಾಡಿದ್ದಾರೆಯೇ ಎಂದು ಚರ್ಚೆಗಳು ನಡೆಯುತ್ತಿದೆ.

- Advertisement -

Related news

error: Content is protected !!