Sunday, June 29, 2025
spot_imgspot_img
spot_imgspot_img

ಕಡಬ: ಅಕ್ರಮವಾಗಿ ಜಾನುವಾರು ಸಾಗಾಟ; ಇಬ್ಬರು ಪೋಲಿಸರ ವಶಕ್ಕೆ..!

- Advertisement -
- Advertisement -

ಕಡಬ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಆರೋಪದಡಿ ಜಾನುವಾರು ಸಹಿತ ಇಬ್ಬರನ್ನು ಕಡಬ ಪೋಲಿಸರು ವಶಕ್ಕೆ ಪಡೆದು ಎಫ್.ಐ.ಆರ್ ದಾಖಲಿಸಿದ್ದಾರೆ. ಬಂಧಿತರು ಪಿಕಪ್ ಚಾಲಕ ರವಿ ಹಾಗೂ ಅಬ್ದುಲ್ ಅಜೀಝ್ ಎನ್ನಲಾಗಿದೆ.

ಫೆ.16 ರಂದು ಕುಟ್ರುಪಾಡಿ ಗ್ರಾಮದ ಕೇಪು ಎಂಬಲ್ಲಿ ಪಿಕಪ್ ವಾಹನದಲ್ಲಿ ಜಾನುವಾರೊಂದನ್ನು ನೆಲ್ಯಾಡಿ ಕಡೆಗೆ ಸಾಗಿಸುತ್ತಿದ್ದರು ಎನ್ನಲಾಗಿದೆ. ಗಸ್ತು ನಿರತ ಹೊಯ್ಸಳ ಪೋಲಿಸರಿಗೆ ಈ ವಿಷಯ ತಿಳಿದು ಪಿಕಪ್ ಹಾಗೂ ಇಬ್ಬರನ್ನು ವಶಕ್ಕೆ ಪಡೆದಿದ್ದರು.

ಕಡಬ ಠಾಣೆಯಲ್ಲಿ ಅ.ಕ್ರ 14/2022 ಕಲಂ. 4.5 ಕರ್ನಾಟಕ ಜಾನುವಾರು ಹತ್ಯೆ ಪ್ರತಿಭಂದಕ ಮತ್ತು ಸಂರಕ್ಷಣಾ ಅದ್ಯಾದೇಶ -2020 ಹಾಗೂ ಕಲಂ ; 66(1) 192(A) IMV ACT-1988 ಯಂತೆ ಪ್ರಕರಣ ದಾಖಲಾಗಿದೆ.

vtv vitla
vtv vitla
- Advertisement -

Related news

error: Content is protected !!