Thursday, April 25, 2024
spot_imgspot_img
spot_imgspot_img

ಬಂಟ್ವಾಳ: ಕಾರು ಹಾಗೂ ಆಟೋ ರಿಕ್ಷಾ ನಡುವೆ ಭೀಕರ ಅಪಘಾತ- ರಿಕ್ಷಾ ಚಾಲಕ ಸ್ಥಳದಲ್ಲೇ ಮೃತ್ಯು!

- Advertisement -G L Acharya panikkar
- Advertisement -

ಬಂಟ್ವಾಳ: ಕಾರು ಹಾಗೂ ಆಟೋ ರಿಕ್ಷಾ ನಡುವೆ ಭೀಕರ ಅಪಘಾತ ಸಂಭವಿಸಿ ಆಟೋ ರಿಕ್ಷಾ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಕೊಡಾಜೆ ತಿರುವಿನಲ್ಲಿ ನಡೆದಿದೆ‌.

ಮಾಣಿಯಿಂದ ಪುತ್ತೂರು ಕಡೆಗೆ ತೆರಳುತ್ತಿದ್ದ ಕಾರು ಕೊಡಾಜೆ ಕಡೆಯಿಂದ ಮಾಣಿ ಕಡೆಗೆ ಆಟೋ ರಿಕ್ಷಾ ನಡುವೆ ಈ ಅಪಘಾತ ಸಂಭವಿಸಿದೆ.

ಕೊಡಾಜೆ ಪಂತ್ತಡ್ಕ ನಿವಾಸಿ ಅಮ್ಮಿ ಮೃತಪಟ್ಟ ಆಟೋ ರಿಕ್ಷಾ ಚಾಲಕ. ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಚಾಲಕನ ಪತ್ನಿಯ ಕಾಲಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದ ತೀವ್ರತೆಗೆ ಆಟೋ ರಿಕ್ಷಾ ಕಾರಿನ ಮೇಲೆ ಉರುಳಿ ಬಿದ್ದು, ಎರಡು ವಾಹನಗಳು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

- Advertisement -

Related news

error: Content is protected !!