Thursday, April 18, 2024
spot_imgspot_img
spot_imgspot_img

ಕಡಬ: ಕಳ್ಳತನ ಪ್ರಕರಣ; ಮೂರು ತಿಂಗಳ ನಂತರ ಆರೋಪಿಯ ಬಂಧನ

- Advertisement -G L Acharya panikkar
- Advertisement -

ಕಡಬ: ಮೂರು ತಿಂಗಳ ಹಿಂದೆ ಕಡಬದ ಬಂಟ್ರ ಗ್ರಾಮದ ಪಾಲೆತ್ತಡ್ಕ ಎಂಬಲ್ಲಿ ಮನೆಗೆ ನುಗ್ಗಿ ನಗದು ಕಳವುಗೈದಿರುವ ಆರೋಪಿಯನ್ನು ಕಡಬ ಪೋಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಮರ್ದಾಳ ನಿವಾಸಿ ಹಕೀಂ (23) ಎಂದು ಗುರುತಿಸಲಾಗಿದ್ದು, ಹಕೀಂ ಗೆ ಕಳ್ಳತನಕ್ಕೆ ಸಹಕರಿಸಿದ ಇನ್ನೋರ್ವ ಆರೋಪಿ ಹಮೀದ್(25) ಇನ್ನೊಂದು ಪ್ರಕರಣದಲ್ಲಿ ಬೆಂಗಳೂರಿನ ಪೋಲೀಸರು ಬಂಧಿಸಿದ್ದು, ಕಡಬ ಪೊಲೀಸರು ಇನ್ನಷ್ಟೇ ವಶಕ್ಕೆ ಪಡೆಯಬೇಕಿದೆ.

ಪಾಲೆತಡ್ಕ ನಿವಾಸಿ ಬಾಲಕೃಷ್ಣ ರೈ ಎಂಬವರಿಗೆ ಮರ್ದಾಳದಲ್ಲಿ ಅಂಗಡಿ ಇದ್ದು, ಇವರ ಚಲನವಲನಗಳ ಮೇಲೆ ನಿಗಾ ಇಟ್ಟು, ಫೆ. 22 ರಂದು ರಾತ್ರಿ ಮನೆಯ ಹಿಂಬಾಗಿಲಿನಿಂದ ನುಗ್ಗಿ, ಮನೆಯಲ್ಲಿದ್ದ 66 ಸಾವಿರ ರೂ. ಕಳ್ಳತನ ಮಾಡಿದ್ದಾರೆ.

ಹಕೀಂ ಮರ್ದಾಳದ ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದು, ಹಮೀದ್ ನ ತಂದೆಯೂ ಅಲ್ಲೇ ಕೆಲಸ ನಿರ್ವಹಿಸುತ್ತಿದ್ದರು. ಆಗಾಗ ಹೋಟೇಲ್‌ಗೆ ಬರುತ್ತಿದ್ದ ಹಮೀದ್ ಹಕೀಂನೊಂದಿಗೆ ಕಳ್ಳತನದ ವ್ಯವಹಾರ ಇಟ್ಟುಕೊಂಡಿದ್ದ. ಅಂತೆಯೇ ಬಾಲಕೃಷ್ಣ ರೈ ಅವರ ಮನೆಗೆ ಕನ್ನ ಹಾಕಲು ನಿರ್ಧರಿಸಿ ರಾತ್ರೋ ರಾತ್ರಿ ಮನೆಗೆ ನುಗ್ಗಿ ಹಣ ಕಳ್ಳತನ ಮಾಡಿದ್ದಾರೆ.

ಕಡಬ ಎಸ್‌ಐ ಆಂಜನೇಯ ರೆಡ್ಡಿ, ಮಾರ್ಗದರ್ಶನದಲ್ಲಿ ತನಿಖಾ ಎಸ್‌ಐ ಶ್ರೀಕಾಂತ್ ರಾತೋಡ್, ಪೊಲೀಸ್ ಸಿಬ್ಬಂದಿಗಳಾದ ರಮೇಶ್, ಮಹೇಶ್, ಭವಿತ್, ದೀಪಕ್ ಮತ್ತಿತರರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

- Advertisement -

Related news

error: Content is protected !!