Saturday, April 27, 2024
spot_imgspot_img
spot_imgspot_img

ಕಲ್ಲಡ್ಕ: “ಬೆರಿತ ಪಿರವು” ಇದರ ಸಮಾರೋಪ ಸಮಾರಂಭ ಹಾಗೂ ಗ್ರಾಮೀಣ ಕ್ರೀಡಾಕೂಟ

- Advertisement -G L Acharya panikkar
- Advertisement -

ಕಲ್ಲಡ್ಕ: ಕ್ರೀಡೆಗಳು ಜನರ ಬದುಕಿನಲ್ಲಿ ಹೊಸ ಹುರುಪು ತುಂಬುತ್ತದೆ ಇದರಲ್ಲಿ ಇರುವಂತೆ ಜೀವನದಲ್ಲೂ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಗುಣ ಬೆಳೆದಾಗ ಕಷ್ಟದ ಸಮಯದಲ್ಲಿ ಹತಾಶೆ ಮೂಡದೇ ಪರಿಸ್ಥಿತಿಗಳಿಗೆ ಹೊಂದಿಕೊಂಡು ಹೋಗುವ ಗುಣ ಬೆಳೆಯಲು ಸಾಧ್ಯ.

ಕ್ರೀಡೆಗಳು ಮಾನವನ ಬದುಕಿನ ಅವಿಭಾಜ್ಯ ಅಂಗವಾದಾಗ ಆತ ಸದಾ ಸಂತೋಷದಿಂದಿರಲು ಸಾಧ್ಯವಾಗುತ್ತದೆ ಎಂದು ಮಾಜಿ ಶಾಸಕರಾದ ಶ್ರೀಯುತ ಎ.ರುಕ್ಮಯ ಪೂಜಾರಿಯವರು ಕಲ್ಲಡ್ಕ ಧಮ೯ದಬಳ್ಳಿ ಬೈಲಗದ್ದೆಯಲ್ಲಿ ಶ್ರೀಮತಿ ಜಾನಕಿ ವೆಂಕಪ್ಪ ಪೂಜಾರಿ ವೇದಿಕೆಯಲ್ಲಿ ನಡೆದ ಮಣಿಕಂಠ ಯುವಶಕ್ತಿ ಕುದ್ರಬೆಟ್ಟು ಮತ್ತು ಸ್ವಸಹಾಯ ಸಂಘಗಳ ಗುಂಪು ,ಹಿರಿಯ ವಿದ್ಯಾರ್ಥಿ ಸಂಘ ,ಸಿದ್ದಿ ದೇವತಾ ಸೇವಾ ಸಮಿತಿ ಎಳ್ತಿಮಾರ್ ಇದರ ಆಶ್ರಯದಲ್ಲಿ ಹಿಂದಿನ ಹಿನ್ನೆಲೆಗೆ ಜೀವಂತಿಕೆ ನೀಡಿದ ಸಂಚಿಕೆ “ಬೆರಿತ ಪಿರವು” ಇದರ ಸಮಾರೋಪ ಸಮಾರಂಭ ಹಾಗೂ ಗ್ರಾಮೀಣ ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೃಷ್ಣಪ್ಪ ಪೂಜಾರಿ ಬೊಲ್ಪೋಡಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶ್ರೀ ಮಣಿಕಂಠ ಭಜನಾ ಮಂದಿರದಿಂದ ಹಿರಿಯ ಕ್ರೀಡಾಪಟು ಸುಂದರ ಪಾದೆ ಇವರು ಕ್ರೀಡಾ ಜ್ಯೋತಿಯನ್ನು ಕ್ರೀಡಾಕೂಟ ನಡೆವ ಗದ್ದೆಗೆ ತರುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಮಾಜಿಸದಸ್ಯರಾದ ವೆಂಕಟರಾಯ ಪ್ರಭು ,ಬಿ.ಜೆ. ಪಿ ಫಲಾನುಭವಿ ಪ್ರಕೋಷ್ಠದ ಸದಸ್ಯರಾದ ಲೋಕನಂದ ಏಳ್ತಿಮಾರು, ಬಾಳ್ತಿಲ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಮಮತಾ ಕಶೆಕೋಡಿ ,ಶ್ರೀಮತಿ ಶೋಭಾ ,ಶ್ರೀಮತಿ ರಂಜಿನಿ ,ಲತೇಶ್ ಕುರ್ಮನ್,ಕುದ್ರೆಬೆಟ್ಟು ಸರ್ಕಾರಿ ಶಾಲೆಯ ಮುಖ್ಯಶಿಕ್ಷಕಿ ಚೇತನ ಟೀಚರ್ ,ಸ್ವಸಹಾಯ ಸಂಘದ ಬಾಳ್ತಿಲ ಒಕ್ಕೂಟದ ಅಧ್ಯಕ್ಷರಾದ ಸಂಧ್ಯಾ ನಾಯಕ್, ಮಾಜಿ ಸೈನಿಕರಾದ ಚಂದ್ರಶೇಖರ ದಾಸಕೋಡಿ ,ಮಣಿಕಂಠ ಯುವಶಕ್ತಿ ಅಧ್ಯಕ್ಷರಾದ ಮಾಧವ ಸಾಲಿಯಾನ್, ನಿಕಟಪೂರ್ವ ಅಧ್ಯಕ್ಷರಾದ ಸನತ್ ಕುಮಾರ್, ಉಪಸ್ಥಿತರಿದ್ದರು.

ಸಂಘಟನೆ ಹಾಗೂ ಸಮಾಜಮುಖಿ ಕೆಲಸಗಳಲ್ಲಿತೊಡಗಿಸಿಕೊಂಡ ಹಿರಿಯರಾದ ಬೈಲಗದ್ದೆಯ ಮಾಲಕರಾದ ಸೀತಾರಾಮ ಧರ್ಮದಬಳ್ಳಿ , ಶ್ರೀರಾಮ ವಿದ್ಯಾಕೇಂದ್ರ ಶಿಕ್ಷಕರಾದ ಜಿನ್ನಪ್ಪ ಏಳ್ತಿಮಾರು ಬಾಳ್ತಿಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸುಂದರ ಸಾಲಿಯಾನ್, ಬೆರಿತ ಪಿರಾವು ಸಂಚಿಕೆಯ ಶಕ್ತಿಗಳಾದ ನಿತಿನ್ ಅಮೀನ್ ಮಿತ್ತಬೈಲ್ ,ಗೋಪಾಲಕೃಷ್ಣ ದರ್ಖಾಸ್ ,ಶ್ರೀಮತಿ ರಾಮಕ್ಕ ಬೊಲ್ಪೋಡಿ ,ವಾಸು ಪೂಜಾರಿ ಧರ್ಮದ ಬಳ್ಳಿ ಹಾಗೂ, ಕುದುರೆ ಬೆಟ್ಟು ಹಿನ್ನಲೆಯ ಮನೆತನ ಮತ್ತು ಊರಿನ ಸೇವಾಚಟುವಟಿಕೆ ಹೋರಾಟಗಳಲ್ಲಿ ಪಾಲ್ಗೊಂಡ ಹಿರಿಯರನ್ನು ಗೌರವಿಸಲಾಯಿತು. ಸ್ಥಳೀಯರು ಗ್ರಾಮೀಣ ಕ್ರೀಡೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು .ಶರಣ್ಯ ಮತ್ತು ರಮೇಶ್ ಪುಣಚ ಇವರು ಹಾಡಿನ ಮೂಲಕ ರಂಜಿಸಿದರು. ಸ್ಥಳೀಯ ಪ್ರತಿಭೆಗಳಿಂದ ನೃತ್ಯ ಸಿಂಚನ ಗಾಳಿಪಟ ಹಾರಾಟ ಎಲ್ಲರನ್ನು ಮನಸೆಳೆಯಿತು.

driving

ಸಂಜೆ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಚೆನ್ನಪ್ಪ ಕೋಟ್ಯಾನ್ಇವರ ಅಧ್ಯಕ್ಷತೆಯಲ್ಲಿಸಮಾರೋಪ ಸಮಾರಂಬ ನೆರವೇರಿತು ಅತಿಥಿಗಳಾಗಿ ಬಾಳ್ತಿಲ ಗ್ರಾಮ ಪಂಚಾಯಿತಿ ಸದಸ್ಯರಾದ ಬಿ.ಕೆ ಅಣ್ಣುಪೂಜಾರಿ ಕಲ್ಲಡ್ಕ ಬಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ,ರಮೇಶ್ ಪೂಜಾರಿ ಹೊಸಕಟ, ನೆಟ್ಲ ದೇವಸ್ಥಾನ ವ್ಯವಸ್ಥಾಪನ ಸಮಿತಿ ಸದಸ್ಯರಾದ ದಿವ್ಯ ರಮೇಶ್ ,ಬಿಜೆಪಿ ನಾಲ್ಕನೇ ವಾರ್ಡಿನ ಅಧ್ಯಕ್ಷರಾದ ರವಿ ಸುವರ್ಣ ಬೈಲು ,ಬಿಜೆಪಿ ಎಸ್ ಸಿ ಮೋರ್ಚಾ ಬಂಟ್ವಾಳ ಇದರ ಪ್ರಧಾನ ಕಾರ್ಯದರ್ಶಿ ರಮೇಶ್ ಕೆ ಕುದ್ರೆಬೆಟ್ಟು ,ಲೋಕೇಶ್ ಮಾಪಲ ,ಜಗದೀಶ್ ಜ್ಯೋತಿಪ್ರಕಾಶ್ ,ಕೇಶವ ಹಾಗೂ,ಭೋಜರಾಜ ಕುದ್ರೆಬೆಟ್ಟು ,ಸಂತೋಷ್ ಕುಮಾರ್ ಬೋಲ್ಪೊಡಿ ,ಸುನಿಲ್ ಕುಮಾರ್ ,ಪ್ರಜ್ವಲ್ ಮಿತ್ತಬೈಲ್ ,ಉಪಸ್ಥಿತರಿದ್ದರು ನಿತಿನ್ ಕುಮಾರ್ ಕುದ್ರೆಬೆಟ್ಟು ಸ್ವಾಗತಿಸಿ ,ಸುಜಾತ ಕುದ್ರೆಬೆಟ್ಟು ವಂದಿಸಿದರು ಜಿನ್ನಪ್ಪ ಪೂಜಾರಿ ಏಳ್ತಿಮಾರು ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!