Sunday, June 14, 2026
spot_imgspot_img
spot_imgspot_img

ಕಡಬ: ಕೃಷಿ ತೋಟದಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ

- Advertisement -
- Advertisement -
vtv vitla

ಕಡಬ: ಕೃಷಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯೋರ್ವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಕಡಬ ತಾಲೂಕಿನ ಚಾರ್ವಾಕ ಗ್ರಾಮದ ಕುಂಬ್ಲಾಡಿ ಎಂಬಲ್ಲಿ ನಡೆದಿದೆ.

ಗದಗ ಜಿಲ್ಲೆಯ ಗೋವಿಂದ (55) ಮೃತ ವ್ಯಕ್ತಿ. ಗದಗ ಜಿಲ್ಲೆಯ ಗೋವಿಂದ ಎಂಬಾತನನ್ನು ಕೃಷಿ ಹಾಗೂ ಕೋಳಿ ಫಾರಂ ನೋಡಿಕೊಳ್ಳಲು ನೇಮಿಸಿಕೊಂಡಿದ್ದು, ಆರು ತಿಂಗಳಿನಿಂದ ಕೆಲಸ ಮಾಡುತಿದ್ದು ಫೆ. 21 ರಂದು ಗೋವಿಂದ ಊರಿಗೆ ಹೋಗುವುದಾಗಿ 5000 ರೂ. ಪಡೆದಿದ್ದಾರೆ.

ಫೆ. 25ರಂದು ಸತ್ಯಪ್ರಸಾದ್ ಅವರು ತಮ್ಮ ಕೃಷಿ ತೋಟಕ್ಕೆ ನೀರು ಬಿಡಲು ತೋಟಕ್ಕೆ ಹೋದಾಗ ವಾಸನೆ ಬರುತ್ತಿದ್ದು ಹತ್ತಿರ ಹೋಗಿ ನೋಡಿದಾಗ ಮೃತದೇಹವೊಂದು ಕೊಳೆತ ಸ್ಥಿತಿಯಲ್ಲಿ ಕಂಡು ಬಂತು. ಪರಿಶೀಲಿಸಿದಾಗ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಗೋವಿಂದನ ಮೃತದೇಹ ಎಂಬುದು ತಿಳಿಯಿತು.

ಮೃತ ಗೋವಿಂದ ಯಾವುದೋ ವಿಷಪದಾರ್ಥ ಸೇವನೆ ಮಾಡಿಯೋ ಅಥವಾ ಇನ್ನಾವುದೋ ಕಾರಣದಿಂದ ಮೃತಪಟ್ಟಿರಬಹುದೆಂದು ಸಂಶಯಿಸಲಾಗಿದೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!