Tuesday, June 23, 2026
spot_imgspot_img
spot_imgspot_img

ಕೊಲ್ಲೂರು ಮೂಕಾಂಬಿಕೆಗೆ ಅಂದು ಚಿನ್ನದ ಖಡ್ಗ ಕೊಟ್ಟಿದ್ದ ಎಂಜಿಆರ್!

- Advertisement -
- Advertisement -

ಎಷ್ಟು ಕೆಜಿ? ಇಂದಿನ ಬೆಲೆ ಎಷ್ಟು ಗೊತ್ತಾ?

ಕೊಲ್ಲೂರು: ವಿಜಯ್​ಗೂ ಮುನ್ನ ತಮಿಳು ನಾಡಿನಲ್ಲಿ ಈ ಹಿಂದೆ ರಾಜ್ಯಭಾರ ಮಾಡಿದವರೂ ಮೂಕಾಂಬಿಕೆಗೆ ಶರಣಾಗಿದ್ದರು. ಎಂಜಿಆರ್ ಚಿನ್ನದ ಖಡ್ಗವನ್ನೂ ಅರ್ಪಿಸಿದ್ದರು. ಅದನ್ನು ಇಂದಿಗೂ ದೇವಿಯ ಸೇವೆಯಲ್ಲಿ ಬಳಸಲಾಗುತ್ತದೆ.

ಕೊಲ್ಲೂರು ಮೂಕಾಂಬಿಕೆ ದೇವಿ ಮೇಲೆ ತಮಿಳುನಾಡಿನ ರಾಜಕಾರಣಿಗಳಿಗೆ ವಿಶೇಷವಾದ ನಂಟಿದೆ. ವಿಜಯ್​ಗೂ ಮೊದಲು ಎಂ. ಜಿ. ರಾಮಚಂದ್ರನ್, ಜಾನಕಿ ರಾಮಚಂದ್ರನ್​, ಜಯಲಲಿತಾ ಈ ಮೂವರು ತಾವು ಸಿಎಂ ಆಗಿದ್ದಾಗ ಕೊಲ್ಲೂರು ಮೂಕಾಂಬಿಕೆ ದೇಗುಲಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ್ದರು.

1 ಕೆಜಿ ತೂಕದ ಚಿನ್ನದ ಖಡ್ಗ ಕೊಟ್ಟಿದ್ದ ಎಂಜಿಆರ್

1980ರಲ್ಲಿ ಕೊಲ್ಲೂರಿಗೆ ಬಂದಿದ್ದ ಎಂಜಿಆರ್, 1 ಕೆಜಿ ತೂಕದ ಚಿನ್ನದ ಖಡ್ಗ ಸಮರ್ಪಿಸಿದ್ದರು. ಈಗಲೂ ದೇವಿಯ ಕೈಯಲ್ಲಿ ಈ ಖಡ್ಗ ಇದೆ. ಇನ್ನು, 2004ರಲ್ಲಿ ಜಯಲಲಿತಾ ಕೂಡ ಕೊಲ್ಲೂರಿಗೆ ಬಂದು ಚಂಡಿಕಾ ಯಾಗ ಮಾಡಿಸಿದ್ದರು. ಈ ವೇಳೆ ಮೂಕಾಂಬಿಕೆ ದೇವಿಗೆ ಚಿನ್ನದ ಕವಚ ಸಮರ್ಪಿಸಿದ್ದರು. ಅನ್ನದಾನ ಸೇವೆಗೆ ನಗದು ದೇಣಿಗೆಯನ್ನು ನೀಡಿದ್ದರು. 1980ರಲ್ಲಿ ಭಾರತದಲ್ಲಿ 10 ಗ್ರಾಂ ಚಿನ್ನದ ಬೆಲೆ 1330 ರೂಪಾಯಿಯ ಆಸುಪಾಸಿನಲ್ಲಿತ್ತು. ಅಂದು ಈ ಖಡ್ಗದ ಬೆಲೆ ಅಂದಾಜು 13,30,000 ರೂಪಾಯಿ ಆಗಿರುವ ಸಾಧ್ಯತೆ ಇದೆ. ಇಂದಿನ ಬೆಲೆ ನೋಡುವುದಾದರೆ, ಸದ್ಯ ಭಾರತದಲ್ಲಿ 24 ಕ್ಯಾರೆಟ್ ಒಂದು ಗ್ರಾಂ ಚಿನ್ನಕ್ಕೆ 14,858 ರೂಪಾಯಿ ಬೆಲೆ ಇದ್ದು, 1 ಕೆಜಿಯಲ್ಲಿ ಚಿನ್ನದ ಖಡ್ಗ ಮಾಡಿಸುವುದಾದರೆ 1,50,43,400 ರೂಪಾಯಿ ಖರ್ಚಾಗಬಹುದು. ಇದು ಅಂದಾಜು ಲೆಕ್ಕವೇ ಹೊರತು, ನಿಖರವಲ್ಲ.

ನಟ ವಿಜಯ್ ಅವರು ಮೂಕಾಂಬಿಕಾ ದೇವಿಯ ದರ್ಶನ, ಪೂಜೆ ಮಾಡಿದ್ದಾರೆ. ಆಡಳಿತ ಯಶಸ್ಸಿಗೆ ಸಂಕಲ್ಪ, ಅರ್ಚನೆ ಮಾಡಿಸಿದ್ದು
ದೇವಿಗೆ ವಿಶೇಷ ಕಾಣಿಕೆ ಸಮರ್ಪಣೆ ಮಾಡಿದ್ದಾರೆ. ದೇವಿಗೆ ರೇಷ್ಮೆ ಸೀರೆ, ಹಣ್ಣು-ಹಂಪಲು ಅರ್ಪಿಸಿದ್ದಾರೆ.ಅಷ್ಟೇ ಅಲ್ಲದೆ ವಿಜಯ್ ಅವರು ಬೆಳ್ಳಿಯ ಖಡ್ಗವನ್ನು ದೇವಿಗೆ ಅರ್ಪಿಸಿದ್ದಾರೆ. ಇದು ಸುಮಾರು 500 ಗ್ರಾಂ ತೂಕ ಇದೆ ಎನ್ನಲಾಗಿದೆ.

- Advertisement -

Related news

error: Content is protected !!