Saturday, June 28, 2025
spot_imgspot_img
spot_imgspot_img

ಕಡಬ: ಗ್ಯಾಸ್‌ ಪಂಪ್‌ನಲ್ಲಿ ಅಧಿಕ ದರ ವಸೂಲಿ; ಪ್ರಶ್ನಿಸಿದ ಚಾಲಕನಿಗೆ “ಹೋಗಿ ಹಗ್ಗ ತಗೊಳ್ಳಿ” ಎಂದು ಉಡಾಫೆ ಉತ್ತರ ನೀಡಿದ ಸಿಬ್ಬಂದಿ- ಮುತ್ತಿಗೆ ಹಾಕಿದ ಆಟೋ ಚಾಲಕರು..!!

- Advertisement -
- Advertisement -
vtv vitla

ಕಡಬ: ಗ್ಯಾಸ್‌ ದರವು ಕಡಿಮೆಯಾಗಿದ್ದರು ಹಿಂದಿನ ದರವನ್ನೇ ಪಡೆದ ಸಿಬ್ಬಂದಿಯನ್ನು ಆಟೋ ಚಾಲಕ ಪ್ರಶ್ನಿಸಿದಾಗ ಉಡಾಫೆ ಉತ್ತರ ನೀಡಿದ್ದು, ಇದರಿಂದ ಆಕ್ರೋಶಗೊಂಡ ಆಟೋ ಚಾಲಕರು ಪಂಪ್‌ಗೆ ಮುತ್ತಿಗೆ ಹಾಕಿದ ಕಡಬದಲ್ಲಿ ನಡೆದಿದೆ

ಆಟೋ ಎಲ್‌ಪಿಜಿ ದರದಲ್ಲಿ ಕಡಿತವಾಗಿದ್ದರೂ ಮುಂಜಾನೆ 6ರಿಂದ 9ರವರೆಗೆ ಎಲ್‌ಪಿಜಿ ಪಂಪಿನಲ್ಲಿ ಹಳೆ ದರದಲ್ಲಿಯೇ ಗ್ಯಾಸ್ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಇದನ್ನು ಪ್ರಶ್ನಿಸಿದ ಆಟೋ ಚಾಲಕನಿಗೆ ಗ್ಯಾಸ್‌ ಸಿಬ್ಬಂದಿ “ಹೋಗಿ ಹಗ್ಗ ತಗೊಳ್ಳಿ” ಎಂದು ಉಡಾಫೆ ಉತ್ತರ ನೀಡಿದ್ದಾರೆನ್ನಲಾಗಿದೆ.

ಈ ವಿಷಯ ತಿಳಿದು ಆಟೋ ಚಾಲಕರು ಪಂಪ್‌ಗೆ ದೌಡಾಯಿಸಿ ಆಟೋ ಚಾಲಕರಿಂದ ಪಡೆದ ಅಧಿಕ ದರವನ್ನು ವಾಪಾಸು ನೀಡುವುದಲ್ಲದೆ ಸಿಬ್ಬಂದಿ ಕ್ಷಮೆ ಹೇಳಬೇಕೆಂದು ಹಠ ಹಿಡಿದಿದ್ದಾರೆ. ಕೂಡಲೇ ಸೇಲ್ಸ್ ಮ್ಯಾನೇಜರ್ ಮಧ್ಯಪ್ರವೇಶಸಿ ಸಿಬ್ಬಂದಿಗಳಿಂದ ಆಗಿರುವ ಪ್ರಮಾದವನ್ನು ಒಪ್ಪಿಕೊಂಡು, ಬೆಳಿಗ್ಗೆ 6 ಗಂಟೆಯಿಂದ 9 ಗಂಟೆ ತನಕ ಗ್ಯಾಸ್ ಹಾಕಿರುವ ಆಟೋಗಳಿಂದ ಹೆಚ್ಚುವರಿಯಾಗಿ ಪಡೆದುಕೊಂಡಿರುವ ಹಣವನ್ನು ತಮ್ಮ ವೈಯುಕ್ತಿಕ ಖಾತೆಯಿಂದ ನೀಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!