Saturday, April 20, 2024
spot_imgspot_img
spot_imgspot_img

ಕಡಬ: ಚಲಿಸುತ್ತಿದ್ದ ಬಸ್‌ನಿಂದ ಹೊರಗೆಸೆಯಲ್ಪಟ್ಟು ಮಹಿಳೆ ಮೃತ್ಯು

- Advertisement -G L Acharya panikkar
- Advertisement -
vtv vitla

ಕಡಬ: ಬಸ್ಸಿನಿಂದ ಹೊರಗೆ ಎಸೆಯಲ್ಪಟ್ಟು ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನೊಪ್ಪಿದ ಘಟನೆ ಕಡಬ ಬಳಿ ನಡೆದಿದೆ.

ಸುಬ್ರಹ್ಮಣ್ಯ- ಧರ್ಮಸ್ಥಳ ರಾಜ್ಯ ಹೆದ್ದಾರಿಯ ಕೇಪು ಲಕ್ಷ್ಮಿ ಜನಾರ್ಧನ ದೇವಸ್ಥಾನದ ಬಳಿ ಈ ದುರ್ಘಟನೆ ನಡೆದಿದ್ದು, ಬೆಂಗಳೂರಿನ ದಾಸರಹಳ್ಳಿಯ ನಾಗರತ್ನಮ್ಮ( 58ವ) ಮೃತಪಟ್ಟವರು.

ಬೆಂಗಳೂರಿನಿಂದ ತಮ್ಮ ಕುಟುಂಬಸ್ಥರೊಂದಿಗೆ ಬೆಂಗಳೂರಿನಿಂದ ರೈಲು ಮೂಲಕ ನೆಟ್ಟಣದಲ್ಲಿ ಬಂದಿಳಿದಿದ್ದರು. ಬಳಿಕ ಅಲ್ಲಿಂದ ಕೆ.ಎಸ್.ಆರ್.ಟಿ.ಸಿ ಬಸ್ ಮೂಲಕ ಧರ್ಮಸ್ಥಳಕ್ಕೆ ತೆರಳಲು ಬಸ್ ಏರಿದ್ದರು.ಬಸ್ ಮುಂಭಾಗ ಕುಳಿತಿದ್ದ ಮಹಿಳೆ ಕೇಪು ದೇವಸ್ಥಾನಕ್ಕೆ ತಲುಪುತ್ತಿದ್ದಂತೆ ಬ್ಯಾಗ್ ತೆಗೆದುಕೊಳ್ಳಲು ಹಿಂಬದಿಗೆ ಹೋಗಿದ್ದರು ಎನ್ನಲಾಗಿದೆ.

ತಿರುವು ರಸ್ತೆಯಲ್ಲಿ ಬಸ್ ಚಲಿಸಿದ ಹಿನ್ನೆಲೆ ಬಸ್ ನ ಹಿಂಬದಿ ಬಾಗಿಲು ಹಾಕದ ಕಾರಣ ಏಕಾಏಕಿ ಮಹಿಳೆ ಬಸ್ ನಿಂದ ಹೊರಗೆ ಎಸೆಯಲ್ಪಟ್ಟು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಡಬ ಸಮುದಾಯ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಕಡಬ ಪೊಲೀಸರು ಪರಿಶೀಲನೆ ನಡೆಸಿರುವುದಾಗಿ ತಿಳಿದು ಬಂದಿದೆ.

- Advertisement -

Related news

error: Content is protected !!