Sunday, May 19, 2024
spot_imgspot_img
spot_imgspot_img

ಕಡಬ: ಸುಬ್ರಹ್ಮಣ್ಯ ಉಪವಲಯ ಅರಣ್ಯಾಧಿಕಾರಿ ಮುಖ್ಯಮಂತ್ರಿ ಚಿನ್ನದ ಪದಕ ಪ್ರಶಸ್ತಿಗೆ ಆಯ್ಕೆ

- Advertisement -G L Acharya panikkar
- Advertisement -

ಕಡಬ: ೨೦೨೧ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಸುಬ್ರಹ್ಮಣ್ಯ ಉಪ ವಲಯ ಅರಣ್ಯಾಧಿಕಾರಿ ಸಂತೋಷ್ ಶಿವಪ್ಪ ದಮ್ಮಸೂರ್ ಆಯ್ಕೆಯಾಗಿದ್ದಾರೆ.

ಅರಣ್ಯ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ೨೫ ಮಂದಿಗೆ ರಾಜ್ಯ ಸರ್ಕಾರದಿಂದ ಮುಖ್ಯಮಂತ್ರಿ ಪದಕ ನೀಡಲಾಗುತ್ತಿದ್ದು, ಸುಳ್ಯ ಅರಣ್ಯ ಇಲಾಖೆಯಿಂದ ಸಂತೋಷ್ ರವರು ಸಂಶೋಧನಾ ವಿಭಾಗದಲ್ಲಿ ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದಾರೆ.

ಪಂಜ ವಲಯದ ಗುತ್ತಿಗಾರು, ಬಳ್ಳ, ಏನೆಕಲ್ಲು ಮತ್ತು ಕೇನ್ಯ ಗಸ್ತುಗಳಲ್ಲಿ ಅರಣ್ಯ ರಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಜಾತಿವಾರು ಸಸಿಗಳ ಸಂಖ್ಯೆಗಳಲ್ಲಿ ಗಮನಿಸಿದ ಅಂಶಗಳ ಆಧಾರದ ಮೇಲೆ ಕೆಲ ಜಾತಿಯ ಸಸಿಗಳ ಸಂಖ್ಯೆಯ ಸಾಂದ್ರತೆ ಹೆಚ್ಚಿಸಿ ಸಂರಕ್ಷಿಸುವವಲ್ಲಿ ಮುಂದಾಗಿದ್ದರು. ಕಾಡುಸಸಿಗಳನ್ನು ಆಯ್ದು ತಂದು ಪಂಜ ವಲಯದ ಏನೆಕಲ್ಲು ಸಸ್ಯ ಕ್ಷೇತ್ರದಲ್ಲಿ ಪೋಷಣೆ ಮಾಡಿ ಅಭಿವೃದ್ಧಿ ಪಡಿಸಿದ ನೆಡುತೋಪುಗಳಲ್ಲಿ ನೆಟ್ಟು ಪೋಷಣೆ ಮಾಡಿ ಸಸಿಗಳ ಸಂಖ್ಯೆ ಹೆಚ್ಚಿಸುವಲ್ಲಿ ಗಮನಾರ್ಹ ಕೆಲಸ ಮಾಡಿರುವುದರಿಂದ ಸಂತೋಷರನ್ನು ಆಯ್ಕೆ ಮಾಡಲಾಗಿದೆ.

ಸಂತೋಷ್ ರವರು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹಾರುಗೊಪ್ಪ ಗ್ರಾಮದವರು. ವಿದ್ಯಾಭ್ಯಾಸದ ಬಳಿಕ ೨೦೦೯ರಲ್ಲಿ ಉಪ್ಪಿನಂಗಡಿ ವಲಯ ಶಿರಾಡಿಯಲ್ಲಿ ಅರಣ್ಯ ರಕ್ಷಕರಾಗಿ ಕೆಲಸಕ್ಕೆ ಸೇರಿದ್ದರು. ೨೦೧೩ರಲ್ಲಿ ಪಂಜ ವಲಯಕ್ಕೆ ವರ್ಗಾವಣೆಗೊಂಡು ೨೦೨೦ರಲ್ಲಿ ಉಪವಲಯಾರಣ್ಯಾಧಿಕಾರಿಯಾಗಿ ಭಡ್ತಿಗೊಂಡು ಸುಬ್ರಹ್ಮಣ್ಯ ವಲಯಕ್ಕೆ ಬಂದರು. ೨೦೨೧ರ ಸೆಪ್ಟೆಂಬರ್ ತಿಂಗಳಿಂದ ಕೇಂದ್ರಿಯ ಮರಗಳ ಸಂಗ್ರಹಾಲಯ ನೆಟ್ಟಣದಲ್ಲಿ ನಿಯೋಜನೆಯ ಮೇಲೆ ಕರ್ತವ್ಯದಲ್ಲಿದ್ದಾರೆ.

- Advertisement -

Related news

error: Content is protected !!