Monday, April 29, 2024
spot_imgspot_img
spot_imgspot_img

ಬೆಳ್ತಂಗಡಿ: ವಿದ್ಯುತ್ ಬಿಲ್ ಬಾಕಿಯಿದೆಯೆಂದು ನಕಲಿ ಮೆಸ್ಕಾಂ ಇಲಾಖೆಯ ಸಂದೇಶ ರವಾನೆ; ಎಚ್ಚರಿಕೆ ವಹಿಸುವಂತೆ ಮೆಸ್ಕಾಂ ಇಲಾಖೆಯಿಂದ ಮಾಹಿತಿ

- Advertisement -G L Acharya panikkar
- Advertisement -

ಬೆಳ್ತಂಗಡಿ: ದಿನೇ ದಿನೇ ಬೇರೆ ಬೇರೆ ರೀತಿಯಲ್ಲಿ ಅಮಾಯಕ ಜನರನ್ನು ವಂಚಿಸುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅಂತಹದ್ದೇ ಪ್ರಕರಣವೊಂದು ಇದೀಗ ಬಯಲಾಗಿದೆ. ಕೆಲ ದಿನಗಳಿಂದ ಹೊಸ ರೀತಿಯಲ್ಲಿ ಅಂದರೆ ಮೆಸ್ಕಾಂ ಇಲಾಖೆಯ ಹೆಸರಲ್ಲಿ ವಿದ್ಯುತ್ ಬಿಲ್ ಬಾಕಿಯಿದೆ ಹಣ ಕಟ್ಟಿ ಎಂದು ಜನರಿಗೆ ಮೊಬೈಲ್ ಸಂದೇಶ ಕಳುಹಿಸಿ ಮೋಸ ಮಾಡಲು ಹೊರಟ್ಟಿದ್ದಾರೆ. ಇದಕ್ಕೆ ಮೆಸ್ಕಾಂ ಇಲಾಖೆ ಕೂಡ ಎಚ್ಚರಿಕೆ ನೀಡಿದೆ.

ವಿವಿಧ ಸಂಖ್ಯೆಗಳಲ್ಲಿ ಸಂದೇಶ ರವಾನೆ: ಮೆಸ್ಕಾಂ ಇಲಾಖೆಯ ಹೆಸರಲ್ಲಿ ವಿವಿಧ ಸಂಖ್ಯೆಗಳಲ್ಲಿ ವಾಟ್ಸಾಪ್ ಸಂದೇಶ ಕಳುಹಿಸುತ್ತಾರೆ .ಅದರಲ್ಲಿ ಅವರದ್ದೇ ಮೆಸ್ಕಾಂ ಕಚೇರಿಯ ಸಂಖ್ಯೆ ಎಂದು ನಮೂದಿಸಿ ಕರೆ ಮಾಡಲು ತಿಳಿಸುತ್ತಾರೆ. ಕೆಲ ಸಮಯದ ನಂತರ ಅ ಸಂಖ್ಯೆಗಳನ್ನು ಸ್ವೀಚ್ ಆಫ್ ಮಾಡಿ ಬೇರೆ ಸಂಖ್ಯೆಯಿಂದ ಬೇರೆ ಬೇರೆ ಜನರಿಗೆ ಸಂದೇಶ ಕಳುಹಿಸುತ್ತಾರೆ ಈ ಖತರ್ನಾಕ್ ಗ್ಯಾಂಗ್.

ಯಾವ ರೀತಿಯಲ್ಲಿ ಸಂದೇಶ ಕಳುಹಿಸುತ್ತಾರೆ ಗೊತ್ತಾ?

ಹೌದು ಇದು ಮೆಸ್ಕಾಂ ಇಲಾಖೆಯ ಹೆಸರಿನಲ್ಲಿ 7679848920 ಸಂಖ್ಯೆಯಿಂದ ” ಪ್ರಿಯ ಗ್ರಾಹಕರೇ ನೀವು ನಿಮ್ಮ ಹಿಂದಿನ ತಿಂಗಳ ವಿದ್ಯುತ್ ಬಿಲ್ ಪಾವತಿಸದ ಕಾರಣ ನಿಮ್ಮ ವಿದ್ಯುತ್ ಸಂಪರ್ಕವನ್ನು ಇಂದು ರಾತ್ರಿ 9:30 ಗಂಟೆಗೆ ಕಡಿತಗೊಳಿಸಲಾಗುವುದು. ತಕ್ಷಣವೇ ವಿದ್ಯುತ್ ಇಲಾಖೆಯ ಮೊಬೈಲ್ ಸಂಖ್ಯೆ 8116170061 ಗೆ ಕರೆ ಮಾಡಿ ವಿದ್ಯುತ್ ಶುಲ್ಕ ಪಾವತಿಸಿ ಧನ್ಯವಾದಗಳು ” ಎಂದು ಇಂಗ್ಲೀಷ್ ನಲ್ಲಿ ವಾಟ್ಸಾಪ್ ಸಂದೇಶ ಕಳುಹಿಸುತ್ತಾರೆ.

ಮೆಸ್ಕಾಂ ಇಲಾಖೆಯ ಅನುಮತಿ ಪಡೆಯದವರಿಗೂ ಸಂದೇಶ:

ಮೆಸ್ಕಾಂ ಇಲಾಖೆಯಿಂದ ಮೀಟರ್ ಅನುಮತಿ ಪಡೆದವರಲ್ಲದವರಿಗೂ ಈ ಗ್ಯಾಂಗ್ ಸಂದೇಶ ಕಳುಹಿಸಿ ವಂಚನೆ ಮಾಡಿ ಹಣ ಕೀಳಲು ಪ್ರಯತ್ನಿಸುತ್ತಾರೆ. ಮಂಗಳೂರು ಮತ್ತು ಬೆಳ್ತಂಗಡಿ ತಾಲೂಕಿನ ಹಲವು ಮಂದಿಗೆ ಈ ಸಂದೇಶ ಬಂದಿರುತ್ತದೆ.

ಮೆಸ್ಕಾಂ ಇಲಾಖೆಯಿಂದ ಎಚ್ಚರಿಕೆ: ಈ ನಕಲಿ ಮೆಸ್ಕಾಂ ಜಾಲದ ಬಗ್ಗೆ ಎಚ್ಚರಿಕೆಯಿಂದ ಇರಲು ಮೆಸ್ಕಾಂ ಇಲಾಖೆ ಸೂಚಿಸಿದೆ ಅದಲ್ಲದೆ ಇಂತಹ ಯಾವುದೇ ಸಂದೇಶಗಳನ್ನು ಮೆಸ್ಕಾಂ ಇಲಾಖೆ ಕಳುಹಿಸುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

- Advertisement -

Related news

error: Content is protected !!