Tuesday, May 7, 2024
spot_imgspot_img
spot_imgspot_img

ಕಡಲ ಕಿನಾರೆಯಲ್ಲಿ ಕಾಣಿಸಿಕೊಂಡ ನೀಲಿ ಸುಂದರಿಯರು..! ವೆಲೆಲ್ಲಾ ವೆಲೆಲ್ಲಾ ಜಾತಿಯ ಜೆಲ್ಲಿ ಫಿಶ್‌ ಇದು..!

- Advertisement -G L Acharya panikkar
- Advertisement -
vtv vitla

ದಕ್ಷಿಣ ಕ್ಯಾಲಿಫೋರ್ನಿಯಾದ ಕರಾವಳಿಗೆ ಅಪರೂಪದ ಅತಿಥಿಗಳು ಭೇಟಿ ಕೊಟ್ಟಿದ್ದಾರೆ. ನೀಲಿ ಬಣ್ಣದ ಸಾವಿರಾರು ಜೆಲ್ಲಿ ಫಿಶ್‌ಗಳು ಸ್ಥಳೀಯರ ಗಮನ ಸೆಳೆದಿದೆ. ‘ವೆಲೆಲ್ಲಾ ವೆಲೆಲ್ಲಾ’ ಎಂದು ಗುರುತಿಸಲಾದ ಈ ನೀಲಿ ಬಣ್ಣದ ಜೆಲ್ಲಿ ಫಿಶ್‌ಗಳನ್ನು ದೂರದಲ್ಲೇ ನಿಂತು ನೋಡಲು ಸಾರ್ವಜನಿಕರಿಗೆ ಜಲ ಜೀವಶಾಸ್ತ್ರಜ್ಞರು ಮನವಿ ಮಾಡಿಕೊಂಡಿದ್ದಾರೆ.

“ವೆಲೆಲ್ಲಾ ವೆಲೆಲ್ಲಾಗಳು ಮುಕ್ತ ಸಾಗರದಲ್ಲಿ ವಾಸಿಸುವ ಚಪ್ಪಟೆ, ಮೊಟ್ಟೆಯಾಕೃತಿಯಲ್ಲಿರುವ ಹೈಡ್ರಾಯ್ಡ್ ಪಾಲಿಪ್‌ಗಳು. ಕೆಲವೊಮ್ಮೆ ಈ ಜೀವಿಗಳು ಬಲವಾದ ಮಾರುತಗಳ ಕಾರಣದಿಂದ ಕಡಲ ತೀರಕ್ಕೆ ತಳ್ಳಲ್ಪಡುವ ಕಾರಣ ವಸಂತ ಹಾಗೂ ಬೇಸಿಗೆಯ ಆರಂಭದಲ್ಲಿ ಪಾಯಿಂಟ್ ರೆಯೆಸ್ ರಾಷ್ಟ್ರೀಯ ಕಡಲತೀರದಲ್ಲಿ ಕಾಣಸಿಗುತ್ತವೆ,” ಎಂದು ಅಧಿಕಾರಿಗಳು ಫೇಸ್ಬುಕ್‌ನಲ್ಲಿ ಬರೆದಿದ್ದಾರೆ.

‘ಗಾಳಿಯಂತೆ ತೂರಿ ಬರುವ ನಾವಿಕರು’ ಎಂದು ಈ ಜೀವಿಗಳನ್ನು ಕರೆಯಲಾಗುತ್ತದೆ. ಜ಼ೂಪ್ಲಾಂಕ್ಟಾನ್‌ಗಳು ಹಾಗೂ ಮೀನಿನ ಮೊಟ್ಟೆಗಳನ್ನು ತಮ್ಮ ನೀಲಿ ಬಣ್ಣದ ಗ್ರಹಣಾಂಗಗಳ ಮೂಲಕ ತಿನ್ನುತ್ತವೆ ಈ ಜೆಲ್ಲಿಫಿಶ್‌ಗಳು.

- Advertisement -

Related news

error: Content is protected !!