Friday, April 26, 2024
spot_imgspot_img
spot_imgspot_img

ಕಬಡ್ಡಿ ಆಟಗಾರನ ದುರಂತ ಅಂತ್ಯ; ಆಟವಾಡುವ ವೇಳೆ ಕುಸಿದು ಬಿದ್ದು ಮೃತ್ಯು

- Advertisement -G L Acharya panikkar
- Advertisement -

ತಮಿಳುನಾಡು: ಕಬಡ್ಡಿ ಆಡುತ್ತಿದ್ದ ವೇಳೆ ಆಟಗಾರನೋರ್ವ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಕಬಡ್ಡಿ ಆಟಗಾರ ವಿಮಲ್ ಮೃತ ದುರ್ದೈವಿ. ಘಟನೆಯ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಿನ್ನೆ ಕಡಲೂರಿನ ಕಡಂಪುಲಿಯೂರಿನಲ್ಲಿ ನಡೆದ ರಾಜ್ಯ ಕಬಡ್ಡಿ ಸ್ಪರ್ಧೆಯಲ್ಲಿ ಈ ಘಟನೆ ನಡೆದಿದೆ. ಪಂದ್ಯದ ವೇಳೆ ಎದುರಾಳಿ ತಂಡದ ಸದಸ್ಯರು ವಿಮಲ್ ಅವರನ್ನು ಟ್ಯಾಕಲ್ ಮಾಡುತ್ತಿದ್ದಾಗ ವಿಮಲ್ ಗೊಂದಲಗೊಂಡು ನೆಲದ ಮೇಲೆ ಕುಸಿದು ಬಿದ್ದಿದ್ದು, ಮೇಲಕ್ಕೆ ಏಳಲು ಯತ್ನಿಸಿದರೂ ಎದ್ದು ನಿಲ್ಲಲಾಗದೇ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ.

ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಪ್ರಾಣ ಉಳಿಸಲು ಸಾಧ್ಯವಾಗಿಲ್ಲ. ಇನ್ನೂ ವಿಡಿಯೋದಲ್ಲಿ ಕಂಡು ಬರುತ್ತಿರುವಂತೆ ಸಹ ಆಟಗಾರನ ಮಂಡಿ ವಿಮಲ್ ನ ಎದೆಗೆ ಬಡಿದಿದ್ದು, ಇದರಿಂದ ಅವರು ಗಂಭೀರಗೊಂಡರೆ ಎನ್ನುವ ಅನುಮಾನಗಳು ಕೂಡ ಕೇಳಿ ಬಂದಿವೆ.

ಘಟನೆ ಸಂಬಂಧ ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಪೋಸ್ಟ್ ಮಾರ್ಟಮ್ ವರದಿ ಬಂದ ಬಳಿಕ ಸಾವಿನ ಅಸಲಿ ಕಾರಣ ಬಯಲಾಗಬೇಕಿದೆ. ಇನ್ನು ಮೃತದೇಹದ ಅಂತ್ಯಸಂಸ್ಕಾರದ‌ ವೇಳೆ ಟ್ರೋಫಿ ಇಟ್ಟು ಅಂತ್ಯಸಂಸ್ಕಾರ ಮಾಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

- Advertisement -

Related news

error: Content is protected !!