Friday, April 19, 2024
spot_imgspot_img
spot_imgspot_img

ಕರ್ನಾಟಕ ಅಂತಾರಾಷ್ಟ್ರೀಯ ಚಿತ್ರೋತ್ಸವ2022 – ಸಂತೋಷ್ ಶೆಟ್ಟಿ ಅಂಗಡಿಗುತ್ತು ನಿರ್ಮಾಣದ “ಆಕೆ ಮೋಹಿನಿ” ಉತ್ತಮ ಹಾರರ್ ಚಿತ್ರ

- Advertisement -G L Acharya panikkar
- Advertisement -

ಹುಬ್ಬಳ್ಳಿಯಲ್ಲಿ ನಡೆದ ಎರಡನೇ ವರ್ಷದ ಕರ್ನಾಟಕ ಅಂತಾರಾಷ್ಟ್ರೀಯ ಚಿತ್ರೋತ್ಸವ ಅದ್ದೂರಿಯಾಗಿ ನಡೆದಿದ್ದು, ಉಡುಪಿಯ ಸಂತೋಷ್ ಶೆಟ್ಟಿ ನಿರ್ಮಾಣದ ಪುತ್ತೂರಿನ ನಿತಿನ್ ರೈ ಕುಕ್ಕುವಳ್ಳಿ ನಿರ್ದೇಶನದ ಆಕೆ ಮೋಹಿನಿ ಉತ್ತಮ ಹಾರರ್ ಚಿತ್ರವಾಗಿ ಹೊರಹೋಮ್ಮಿದೆ.

ಉತ್ತಮ ಸಂದೇಶ ನೀಡುವ ಆಕೆ ಮೋಹಿನಿ ಕನ್ನಡ ಕಿರು ಚಿತ್ರದಲ್ಲಿ ಬಹುತೇಕ ತುಳುನಾಡಿನ ಕಲಾವಿದರೆ ನಟಿಸಿದ್ದಾರೆ. ಹಮೀದ್ ಪುತ್ತೂರು ಚಿತ್ರಕತೆ ಬರೆದಿದ್ದು, ಧನು ರೈ ಛಾಯಾಗ್ರಾಹನ, ರಾಧೆಶ್ ರೈ ಮೊಡಪ್ಪಾಡಿ ಅವರ ಸಂಕಲನ ಚಿತ್ರಕ್ಕಿದೆ. ಅಶ್ವಿನಿ ಪೆರುವಾಯಿ, ಆರ್. ಜೆ ಇರೆಲ್, ಪೃಥ್ವಿ ಅಂಬರ್, ವಿಶಾಲ್ ಸೂರ್ಯ ಅವರ ಹಿನ್ನೆಲೆ ಧ್ವನಿ ಗಮನ ಸೆಳೆದಿದೆ. ರಮೇಶ್ ರೈ ಕುಕ್ಕುವಳ್ಳಿ ಮತ್ತು ರವಿ ಸ್ನೇಹಿತ್ ಅವರು ಪಾತ್ರಗಳಿಗೆ ಜೀವ ತುಂಬಿದ್ದಾರೆ.

ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ ಮತ್ತು ನಟ ರವಿ ಸ್ನೇಹಿತ್ ನಿರ್ಮಾಪಕರ ಪರವಾಗಿ ಹಿರಿಯ ನಟ ಸುನಿಲ್ ಪುರಾಣಿಕ್ ಅವರಿಂದ ಪ್ರಶಸ್ತಿ ಪಡೆದುಕೊಂಡರು.

- Advertisement -

Related news

error: Content is protected !!