Thursday, July 23, 2026
spot_imgspot_img
spot_imgspot_img

ಕರ್ನಾಟಕ ಪಬ್ಲಿಕ್ ಶಾಲೆ ಕನ್ಯಾನ ಪ್ರೌಢಶಾಲಾ ವಿಭಾಗದಲ್ಲಿ ಶಾಲಾ ಪ್ರಾರಂಭೋತ್ಸವ.

- Advertisement -
- Advertisement -

ಕರ್ನಾಟಕ ಪಬ್ಲಿಕ್ ಶಾಲೆ ಕನ್ಯಾನ ಇಲ್ಲಿನ ಪ್ರೌಢಶಾಲಾ ವಿಭಾಗದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.

ಶಾಲಾ ವಿದ್ಯಾರ್ಥಿಗಳು, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಶಿಕ್ಷಕರು ಹಾಗೂ ಪೋಷಕರು ಗ್ರಾಮ ಪಂಚಾಯತ್ ಗೆ ತೆರಳಿ ಅಲ್ಲಿ ಸಭಾ ಕಾರ್ಯಕ್ರಮದ ಬಳಿಕ ಆಕರ್ಷಕ ಜಾಥಾ ಮೂಲಕ ಶಾಲೆಗೆ ತೆರಳಿದರು.

ಶಾಲೆಯಲ್ಲಿ ಮಕ್ಕಳಿಗೆ ಸ್ವಾಗತ ಹಾಗೂ ಸಭಾ ಕಾರ್ಯಕ್ರಮ ನಡೆಯಿತು. ಬಳಿಕ ಕಲಿಕಾ ಚೇತರಿಕೆ ವರ್ಷ 2022-23 ವಿಷಯದ ಬಗ್ಗೆ ಮಾಹಿತಿ ವಿನಿಮಯ ನಡೆಯಿತು.

ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಣ್ಣು ನೈಕ್, ಶಾಲಾಭಿವೃದ್ಧಿ ಸಮಿತಿ ಮಾಜಿ ಕಾರ್ಯಾಧ್ಯಕ್ಷ ಅಬೂಬಕ್ಕರ್ ಸಿದ್ದೀಕ್, ಉಪಪ್ರಾಂಶುಪಾಲೆ ವಿನುತ, ಶಿಕ್ಷಕರಾದ ಸವಿತಾ, ಅಶ್ವಿನಿ, ಮಂಜುನಾಥ್, ನಮಿತಾ, ರಮ್ಯಾ ಕುಮಾರಿ, ಶ್ರೀಕಂಠೇ ಗೌಡ, ಪ್ರತೀಪ , ಚಂದ್ರಶೇಖರ್ ಕಣಿಯೂರು ಹಾಗೂ ಪೋಷಕರು ಮತ್ತು ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.

- Advertisement -

Related news

error: Content is protected !!