Sunday, May 19, 2024
spot_imgspot_img
spot_imgspot_img

ಕರ್ನಾಟಕ ವಿಧಾನಸಭಾ ಚುನಾವಣೆಗೆ ಡೇಟ್‌ ಫಿಕ್ಸ್‌..! ಮೇ 10 ರಂದು ನಡೆಯಲಿದೆ ಮತದಾನ

- Advertisement -G L Acharya panikkar
- Advertisement -

ಬಹಳ ಕುತೂಹಲ ಕೆರಳಿಸಲಿರುವ ಕರ್ನಾಟಕ ವಿಧಾನಾ ಸಭಾ ಚುನಾವಣೆಯ ಮೂಹೂರ್ತ ಫಿಕ್ಸ್ ಆಗಿದೆ. ಕೇಂದ್ರ ಚುನಾವಣಾ ಆಯೋಗ ಸುದ್ದಿಗೋಷ್ಟಿ ನಡೆಸಿದ್ದು ಚುನಾವಣಾ ದಿನಾಂಕ ಸಹಿತ ಚುನಾವಣೆಯ ದಿನಾಂಕವನ್ನು ಬಿಡುಗಡೆ ಮಾಡಿದ್ದು ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಲಿದೆ.

ಮುಖ್ಯ ಚುನಾವಣಾ ಆಯೋಗದ ಮುಖ್ಯಸ್ಥ ಸುದ್ದಿಗೋಷ್ಟಿ ನಡೆಸಿ ಕರ್ನಾಟಕ ವಿಧಾನಸಭಾ ಚುನಾವಣೆಯ ಬಗ್ಗೆ ಮಾಹಿತಿ ನೀಡಿದ್ದಾರೆ.

ಮೇ 10 ರಂದು ಚುನಾವಣೆ ನಡೆಯಲಿದೆ. ಮೇ 13 ರಂದು ಮತಣಿಕೆ ನಡೆದು ಫಲಿತಾಂಶ ಪ್ರಕಟಗೊಳ್ಳಲಿದೆ.

ಮತದಾನದ ದಿನಾಂಕ: ಮೇ 10 -2023
ಅಧಿಸೂಚನೆ ದಿನಾಂಕ: ಏಪ್ರಿಲ್ 13
ನಾಮಪತ್ರ ಸಲ್ಲಿಕೆಗೆ ಕೊನೆಯ
ದಿನಾಂಕ: ಏಪ್ರಿಲ್ 20
ನಾಮಪತ್ರ ಪರಿಶೀಲನೆ ಏಪ್ರಿಲ್ 21
ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್ 24
ಮತದಾನ ಫಲಿತಾಂಶ: ಮೇ 13

ರಾಜ್ಯದಲ್ಲಿ 5,21,73,579 ಜನ ಮತದಾರರಿದ್ದಾರೆ. 2,62,42,561 ಜನ ಪುರುಷ ಮತದಾರರು ಹಾಗೂ 2,59,26,319 ಮಹಿಳಾ ಮತದಾರರಿದ್ದಾರೆ. 80 ವರ್ಷ ಮೇಲ್ಪಟ್ಟವರು 12,15,763 ಜನ ಇದ್ದಾರೆ. 100 ವರ್ಷ ಮೇಲ್ಪಟ್ಟ 16,976 ಮತದಾರರಿದ್ದಾರೆ. 9,17,241 ಮಂದಿ ಮೊದಲ ಬಾರಿಗೆ ಮತದಾನ ಮಾಡಲಿದ್ದಾರೆ. 4,699 ತೃತೀಯ ಲಿಂಗಿ ಮತದಾರರಿದ್ದಾರೆ. 

ಅಂಕಿ ಅಂಶ

100 ವರ್ಷ ಮೇಲ್ಪಟ್ಟವರು 16,976
80 ವರ್ಷ ಮೇಲ್ಪಟ್ಟವರು 12,15,763
ಒಟ್ಟು ಮತಕೇಂದ್ರಗಳು 57282
ಮಹಿಳಾ ಮತದಾರರು 2.59.26.319
ಪುರುಷ ಮತದಾರರು 2.62.42.561
ತೃತೀಯ ಲಿಂಗಿ ಮತದಾರರು 4,699

- Advertisement -

Related news

error: Content is protected !!