Saturday, April 20, 2024
spot_imgspot_img
spot_imgspot_img

ಕಲ್ಲಡ್ಕ: ಬಾವಿಗೆ ಬಿದ್ದು ನವವಿವಾಹಿತೆ ದಾರುಣ ಸಾವು

- Advertisement -G L Acharya panikkar
- Advertisement -

ಕಲ್ಲಡ್ಕ: ಎರಡು ತಿಂಗಳ ಹಿಂದೆ ಮದುವೆಯಾಗಿದ್ದ ಯುವತಿ ಬಾವಿಗೆ ಬಿದ್ದು ಸಾವನ್ನಪ್ಪಿದ ಘಟನೆ ಕಲ್ಲಡ್ಕದಲ್ಲಿ ನಡೆದಿದೆ. ಬಿ.ಸಿ.ರೋಡ್ ತಲಪಾಡಿ ನಿವಾಸಿ, ಫರಂಗಿಪೇಟೆ ಸಮೀಪದ ಅಮ್ಮೆಮ್ಮಾರ್ ನಲ್ಲಿ ವಾಸವಿರುವ ಮುಹಮ್ಮದ್ ರ ಪುತ್ರಿ ಮುನೀಝಾ (20) ಮೃತಪಟ್ಟ ನವವಿವಾಹಿತೆ.!

ಮುನೀಝಾ ಅವರನ್ನು ಎರಡು ತಿಂಗಳ ಹಿಂದಷ್ಟೇ ಕಲ್ಲಡ್ಕ ಕೆ.ಸಿ.ರೋಡ್ ನಿವಾಸಿ ಇಬ್ರಾಹಿಂ ತೌಸೀರ್ ವಿವಾಹವಾಗಿದ್ದರು. ಇಂದು ಬೆಳಗ್ಗೆ ಬಾವಿಯಿಂದ ನೀರೆತ್ತಲು ಹೋದಾಗ ದುರಂತ ಸಂಭವಿಸಿ ಅಸುನೀಗಿದ್ದಾರೆ.

ಶವವನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!