Sunday, June 14, 2026
spot_imgspot_img
spot_imgspot_img

ಕಾಂಗ್ರೆಸ್‌ ನ ಮೊದಲ ಪಟ್ಟಿ ಬಿಡುಗಡೆಗೆ ಕ್ಷಣಗಣನೆ; ಕರಾವಳಿಯ ಈ ನಾಯಕರಿಗೆ ಟಿಕೆಟ್‌ ಫಿಕ್ಸ್‌..?

- Advertisement -
- Advertisement -

ಮುಂಬರುವ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ನ ಮೊದಲ ಪಟ್ಟಿ ಅಂತಿಮಗೊಂಡಿದ್ದು, ಯಾವುದೇ ಕ್ಷಣದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಕರಾವಳಿ ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಪ್ರಮುಖ ಕ್ಷೇತ್ರಗಳ ಅಭ್ಯರ್ಥಿ ಗಳ ಪಟ್ಟಿ ಅಂತಿಮಗೊಂಡಿದೆ. ದ.ಕ. ಜಿಲ್ಲೆಯ ಬಂಟ್ವಾಳ ಕ್ಷೇತ್ರದಿಂದ ಬಿ. ರಮಾನಾಥ ರೈ, ಮಂಗಳೂರಿನಿಂದ ಯು.ಟಿ. ಖಾದ‍ರ್‍, ಮೂಡುಬಿದರೆ ಮಿಥುನ್ ರೈ, ಕಾವುನಿಂದ ವಿನಯಕುಮಾರ್‌‌ ಸೊರಕೆ ಹೆಸರು ಈ ಪಟ್ಟಿಯಲ್ಲಿದೆ ಎಂದು ತಿಳಿದು ಬಂದಿದೆ.

ಪಕ್ಷದ ಘಟಾನುಘಟಿ ನಾಯಕರ ಪೈಕಿ ಸಿದ್ದರಾಮಯ್ಯ (ಕೋಲಾರ), ಡಿ.ಕೆ. ಶಿವಕುಮಾರ್ (ಕನಕಪುರ), ದಿನೇಶ್ ಗುಂಡೂರಾವ್(ಗಾಂಧಿನಗರ), ಸೌಮ್ಯ ರೆಡ್ಡಿ (ಜಯನಗರ), ರಾಮಲಿಂಗಾ ರೆಡ್ಡಿ (ಬಿಟಿಎಂ ಲೇ ಔಟ್), ಕೃಷ್ಣ ಬೈರೇಗೌಡ (ಬ್ಯಾಟರಾಯನಪುರ), ಬೈರತಿ ಸುರೇಶ್ (ಹೆಬ್ಬಾಳ), ಟಿ.ಬಿ.ಜಯಚಂದ್ರ (ಶಿರಾ), ಅನಿಲ ಚಿಕ್ಕಮಾದು (ಹೆಗ್ಗಡದೇವನಕೋಟೆ), ಕೆ.ಎನ್.ರಾಜಣ್ಣ (ಮಧುಗಿರಿ), ಪ್ರಿಯಾಂಕ್‌ ಖರ್ಗೆ (ಚಿತ್ತಾಪುರ), ಯತೀಂದ್ರ ಸಿದ್ದರಾಮಯ್ಯ (ವರುಣಾ) ಈ ಕ್ಷೇತ್ರಗಳಿಂದ ಕಣಕ್ಕಿಳಿಯಳಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.

- Advertisement -

Related news

error: Content is protected !!