Sunday, July 19, 2026
spot_imgspot_img
spot_imgspot_img

ಕಾಪು ಮಾರಿಗುಡಿ ಸುಗ್ಗಿ ಮಾರಿಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ನಿಷೇಧ; ಹಿಂದು ಸಂಘಟನೆಗಳಿಂದ ಕುರಿ, ಕೋಳಿ ಮಾರಾಟಕ್ಕೆ ಸ್ಟಾಲ್

- Advertisement -
- Advertisement -

ಕಾಪು ಮಾರಿಗುಡಿ ಸುಗ್ಗಿ ಮಾರಿಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ನಿಷೇಧ ಹಾಕಲಾಗಿದ್ದು ಈ ಬಾರಿ ಹಿಂದು ಸಂಘಟನೆಗಳ ಮಂದಿಯೇ ಕುರಿ, ಕೋಳಿ ಆರಂಭಿಸಿದ್ದಾರೆ.

vtv vitla
vtv vitla

ಪ್ರತಿವರ್ಷ ಎರಡು ದಿನದ ಕಾಪು ಮಾರಿ ಜಾತ್ರೆಯಲ್ಲಿ 300 ಕ್ಕೂ ಹೆಚ್ಚು ಮುಸ್ಲಿಂ ವ್ಯಾಪಾರಿಗಳು ಬರುತ್ತಿದ್ದರು. ಕೋಟ್ಯಂತರ ರೂ. ವಹಿವಾಟು ನಡೆಸುತ್ತಿದ್ದರು. ಈ ಬಾರಿ ಮುಸ್ಲಿಂ ವ್ಯಾಪಾರಸ್ಥರಿಗೆ ಅಂಗಡಿ ಮಳಿಗೆಗಳ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವುದಕ್ಕೂ ಅವಕಾಶ ನೀಡಿಲ್ಲ. ಇದರಿಂದಾಗಿ ಮುಸ್ಲಿಂ ವ್ಯಾಪಾರಸ್ಥರಿಗೆ ಸಂಪೂರ್ಣ ನಷ್ಟವಾಗಿದೆ.

ಮುಸ್ಲಿಂ ವ್ಯಾಪಾರಿಗಳಿಗೆ ಪ್ರತಿಯಾಗಿ ಹಿಂದು ಸಂಘಟನೆಗಳ ಕಾರ್ಯಕರ್ತರು ಹೆಚ್ಚಿನ ಸ್ಟಾಲ್ ಹಾಕಿದ್ದಾರೆ. ಕುರಿ, ಕೋಳಿ ಮಾರಾಟಕ್ಕೂ ಸ್ಟಾಲ್ ಹಾಕಿದ್ದು ಜನರಿಗೆ ಮಾರಾಟ ಮಾಡುತ್ತಿದ್ದಾರೆ. ಹಿಂದು ಸಂಘಟನೆಗಳ ಮಂದಿ ಗದಗ, ಶಿವಮೊಗ್ಗ ಹಾಸನದಿಂದ ಕುರಿ, ಕೋಳಿಗಳನ್ನು ತರಿಸಿ ಮಾರಾಟ ಮಾಡುತ್ತಿದ್ದಾರೆ.

vtv vitla
vtv vitla
- Advertisement -

Related news

error: Content is protected !!