Monday, April 29, 2024
spot_imgspot_img
spot_imgspot_img

ಕಾರಿನೊಳಗೆ ಸಿಲುಕಿ 8 ವರ್ಷದ ಬಾಲಕಿ ಉಸಿರುಗಟ್ಟಿ ಸಾವು

- Advertisement -G L Acharya panikkar
- Advertisement -

ಹೈದರಾಬಾದ್: ಕಾರಿನೊಳಗೆ ಬಾಲಕಿಯೊಬ್ಬಳು ಆಕಸ್ಮಿಕವಾಗಿ ಸಿಲುಕಿಕೊಂಡು ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯಲ್ಲಿ ನಡೆದಿದೆ.

ಆದಿಲಕ್ಷ್ಮಿ ಎಂಬವರ ಮಗಳು,ಇತ್ತೀಚೆಗಷ್ಟೇ ಬಾಲಕಿಯ ತಂದೆ ನಿಧನ ಹೊಂದಿದ್ದರು. ಬಾಲಕಿ ತನ್ನ 11 ವರ್ಷದ ಸಹೋದರನ ಹಾಗೂ ತಾಯಿಯೊಂದಿಗೆ ಜೊತೆ ವಾಸವಾಗಿದ್ದಳು. 
8 ವರ್ಷದ ಬಾಲಕಿ ಕಾರಿನೊಳಗೆ ಆಟವಾಡುತ್ತಿದ್ದ ವೇಳೆ ಕಾರಿನ ಡೋರ್ ಲಾಕ್ ಆಗಿ ಬಾಲಕಿ ಒಳಗೆ ಸಿಲುಕಿಕೊಂಡಿದ್ದಾಳೆ. ಪರಿಣಾಮ ಉಸಿರಾಡಲು ಸಾಧ್ಯವಾಗದೇ ಸಾವನ್ನಪ್ಪಿದ್ದು, ಬಾಲಕಿ ಕಾಣದೆ ಇದ್ದಾಗ ಆಕೆಯ ಪೋಷಕರು ಹುಡುಕಾಟ ಆರಂಭಿಸಿ ಕೊನೆಗೆ ಮನೆ ಪಕ್ಕ ನಿಲ್ಲಿಸಿದ್ದ ಕಾರನ್ನು ಚೆಕ್ ಮಾಡಿದ್ದಾರೆ.

ಈ ವೇಳೆ ಬಾಲಕಿ ಕಾರಿನೊಳಗೆ ಪತ್ತೆಯಾದ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಬಾಲಕಿ ಅದಾಗಲೇ ಸಾವನ್ನಪ್ಪಿದ್ದಳೆ ಎಂದು ವೈದ್ಯರು ತಿಳಿಸಿದರು.

- Advertisement -

Related news

error: Content is protected !!