- Advertisement -
- Advertisement -
ಬೆಳ್ಮಣ್: ವಿದೇಶದಲ್ಲಿದ್ದು, ಊರಿಗೆ ಮರಳಿದ ಬಳಿಕ ಕಾರ್ಕಳ ತಾಲೂಕಿನ ಬೆಳ್ಮಣ್ ಗ್ರಾಮದ ತನ್ನ ಪತಿಯ ಸಂಬಂಧಿಕರ ಮನೆಯಲ್ಲಿ ವಾಸವಿದ್ದ ಮಹಿಳೆ ಆಶಾ (32) ಎಂಬವರು ನಾಪತ್ತೆಯಾಗಿದ್ದಾರೆ.
ಏ.25 ರಂದು ಮನೆಯಲ್ಲಿ ಹೇಳದೇ ಹೊರಗೆ ಹೋಗಿದ್ದು, ಹಿಂದಿರುಗಿ ಬಾರದೇ ನಾಪತ್ತೆಯಾಗಿರುವುದಾಗಿ ತಿಳಿದು ಬಂದಿದೆ. ನಾಪತ್ತೆಯಾಗಿರುವ ಆಶಾ ಎಣ್ಣೆಗಪ್ಪು ಮೈ ಬಣ್ಣದವರಾಗಿದ್ದು, 5 ಅಡಿ 2 ಇಂಚು ಎತ್ತರವಿದ್ದಾರೆ. ಕನ್ನಡ, ತಮಿಳು, ತುಳು, ಹಿಂದಿ, ಕೊಂಕಣಿ ಭಾಷೆ ಮಾತನಾಡುತ್ತಾರೆ. ಬಿಳಿ, ಕಪ್ಪು ಗೆರೆಯ ತುಂಬು ತೋಳಿನ ಟೀ ಶರ್ಟ್ ಧರಿಸಿರುತ್ತಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -