Sunday, June 14, 2026
spot_imgspot_img
spot_imgspot_img

ಕಾರ್ಕಳ : ವಿಷ ಸೇವಿಸಿ ಅಸ್ವಸ್ಥಗೊಂಡ ಯುವಕ ಮೃತ್ಯು

- Advertisement -
- Advertisement -

ಕಾರ್ಕಳ : ವಿಷ ಸೇವಿಸಿ ಅಸ್ವಸ್ಥಗೊಂಡಿದ್ದ ಹಿರಿಯಂಗಡಿಯ ಪ್ರಜ್ವಲ್ ದೇವಾಡಿಗ (18) ಎಂಬ ಯುವಕ ಚಿಕಿತ್ಸೆ ಫಲಿಸದೆ ಮಾ.14 ರಂದು ಮೃತಪಟ್ಟಿದ್ದಾರೆ.

ಮಾ. 12ರಂದು ರಾತ್ರಿ ಪ್ರಜ್ವಲ್‌ನ ಅಣ್ಣ ಉಜ್ವಲ್‌ ತಂದೆ ತಾಯಿ ಜತೆ ಕಾರ್ಕಳ ಮಾರಿಗುಡಿಯ ಕಾರ್ಯಕ್ರಮಕ್ಕೆ ಹೋಗಿದ್ದರು. ಮನೆಯಲ್ಲಿ ಒಬ್ಬನೇ ಇದ್ದ ಪ್ರಜ್ವಲ್ ವಿಷ ಸೇವಿಸಿದ್ದ. ಪ್ರಜ್ವಲ್‌ನ ಗೆಳೆಯ ಮಲ್ಲಿಕಾರ್ಜುನ ಈ ಕುರಿತು ಕರೆ ಮಾಡಿ ಉಜ್ವಲ್‌ಗೆ ವಿಷಯ ತಿಳಿಸಿದ್ದರು. ಪ್ರಜ್ವಲ್‌ನನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಪ್ರಜ್ವಲ್ ಮಂಗಳವಾರ ಮೃತಪಟ್ಟಿದ್ದಾರೆ. ಈ ಕುರಿತು ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!