Wednesday, July 29, 2026
spot_imgspot_img
spot_imgspot_img

ಕಾರ್ಕಳ: ಸಾವಿನಲ್ಲೂ ಜೊತೆಯಾದ ಸಹೋದರರು

- Advertisement -
- Advertisement -

ಕಾರ್ಕಳ: ಅಣ್ಣ-ತಮ್ಮ ಸಾವಿನಲ್ಲೂ ಒಂದಾದ ಘಟನೆ ಕಾರ್ಕಳದಲ್ಲಿ ನಡೆದಿದೆ.ಕಾರ್ಕಳದ ಸಾಣೂರು ನಿವಾಸಿ ಮಿಯಾರು ಗುಂಡಾಜೆ ಬಳಿಯ ರಾಜಾರಾಮ್ ರಾವ್ (55) ಇಂದು ಬೆಳಗ್ಗೆ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಬೆಳಗ್ಗೆ ಮೃತ ಪಟ್ಟಿದ್ದಾರೆ.

ಅವರ ಅಣ್ಣ ಸಾಣೂರು ಚಿಕ್ಕಬೆಟ್ಟು ನಿವಾಸಿ ಗಣೇಶ್ ರಾವ್ (60) ಸಂಜೆ ಮತ್ತೊಂದು ಖಾಸಗಿ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ.

ಕಿರಿ ಸೋದರ ರಾಜರಾಮ್ ರಾವ್ ಅವರು ಇತ್ತೀಚೆಗೆ ಅಪಘಾತಕ್ಕೆ ಒಳಗಾಗಿದ್ದರು. ಅವರನ್ನು ಹೆಚ್ಚಿನ ಚಿಕಿತ್ಸೆಯನ್ನು ಮಣಿಪಾಲ ಆಸ್ಪತ್ರೆಯಲ್ಲಿ ಕೊಡಿಸಲಾಗಿತ್ತು. ನಂತರ ಅವರನ್ನು ಕಾರ್ಕಳ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿ ಆಗದೆ ಆತ ಮೃತ ಪಟ್ಟಿದ್ದಾರೆ.

ಹಿರಿಯ ಸಹೋದರ ಗಣೇಶ್ ರಾವ್ ಅವರು ಜಾಂಡೀಸ್ ರೋಗಿಯಾಗಿದ್ದರು. ಜಾಂಡೀಸ್ ಚಿಕಿತ್ಸೆಗಾಗಿ ಅವರು ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಕಿರಿ ಸಹೋದರನ ಸಾವಿನ ದಿನವೇ ಸಂಜೆ 5 ಗಂಟೆಯ ಸುಮಾರಿಗೆ ಅಣ್ಣ ಮೃತ ಪಟ್ಟಿದ್ದಾರೆ.

ಬದುಕಿದ್ದಾಗ ತುಂಬಾ ಆತ್ಮೀಯರಾಗಿದ್ದ ಈ ಸಹೋದರರಿಬ್ಬರು ಸಾವಿನಲ್ಲಿ ಕೂಡಾ ಜತೆಗೆ ಹೊರಟು, ಅಪಾರ ಬಂದು ವರ್ಗದವರನ್ನು ಆಗಲಿ ಹೋಗಿದ್ದಾರೆ.

- Advertisement -

Related news

error: Content is protected !!