Saturday, May 11, 2024
spot_imgspot_img
spot_imgspot_img

ಮಲ್ಪೆ: ಮಾರಕ ಅಸ್ತ್ರ ಹಿಡಿದು ಗಲಾಟೆ ಮಾಡುತ್ತಿದ್ದ ಮೂವರು ಆರೋಪಿಗಳು ಪೊಲೀಸ್‌ ವಶ..!

- Advertisement -G L Acharya panikkar
- Advertisement -

ಮಲ್ಪೆ: ಮಾರಕ ಅಸ್ತ್ರ ಹಿಡಿದು ಗಲಾಟೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಅಡ್ಡಬೇಂಗ್ರೆ ಓಯಾಸಿಸ್‌ ಗೆಸ್ಟ್‌ ಹೌಸ್‌ ಬಳಿ ನಡೆದಿದೆ. ಮೊಹಮ್ಮದ್‌ ಸಕ್ಲೇನ್‌ , ಅಬ್ದುಲ್‌ ರಾಕೀಬ್‌, ಸುಮಿತ್‌ ತೇಜಪಾಲ್‌ ಎಂಬ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.

12 ರಂದು ಎಎಸ್‌ಐ ಸಂತೋಷ ಕುಮಾರ ರಾತ್ರಿ ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಪಿಎಸ್‌ಐ ಕರೆ ಮಾಡಿ ಅಡ್ಡಬೇಂಗ್ರೆಯಲ್ಲಿ 3 ಜನ ವ್ಯಕ್ತಿಗಳು ಮಾರಕಾಯುಧವಾದ ಮಚ್ಚನ್ನು ಹಿಡಿದುಕೊಂಡು ಗಲಾಟೆ ಮಾಡುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ. ಸಿಬ್ಬಂದಿಗಳೊಂದಿಗೆ ಓಯಾಸಿಸ್‌ ಗೆಸ್ಟ್‌ ಹೌಸ್‌ ಬಳಿ ಹೋಗಿ ನೋಡಿದಾಗ ಅಲ್ಲಿ 3 ಜನ ವ್ಯಕ್ತಿಗಳು ಹಾಗೂ ಸಾರ್ವಜನಿಕರು ಸೇರಿದ್ದರು. ಬಳಿಕ ಸಾರ್ವಜನಿಕರನ್ನು ದೂರ ಸರಿಸಿ 3 ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು.

ಆರೋಪಿಗಳ ಬಳಿ ಇದ್ದ ನೋಂದಣಿ ಸಂಖ್ಯೆ ಇಲ್ಲದ ಕಪ್ಪು ಬಜಾಜ್‌ ಪಲ್ಸರ್‌ ಬಜಾಜ್‌ ಸೈಕಲ್‌ ನ ಅಂದಾಜು ಮೌಲ್ಯ 80000 ರೂ , ಸ್ಕೂಟರ್‌, ಹಾಗೂ ಒಂದು ತಲವಾರು ಸ್ವಾದೀನಪಡಿಸಿಕೊಳ್ಳಲಾಯಿತು. ಈ ಬಗ್ಗೆ ಮಲ್ಪೆ ಠಾಣಾ ಶಸ್ರ್ತಾ ನಿಷೇದ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

- Advertisement -

Related news

error: Content is protected !!