Thursday, March 28, 2024
spot_imgspot_img
spot_imgspot_img

ಕಾಸರಗೋಡು: ಗೋವಾಕ್ಕೆ ಫುಟ್ಬಾಲ್ ಫೈನಲ್ ಪಂದ್ಯ ವೀಕ್ಷಿಸಲು ಹೊರಟವರಿಗೆ ಭೀಕರ ಅಪಘಾತ; ಇಬ್ಬರು ಸಾವು

- Advertisement -G L Acharya panikkar
- Advertisement -
vtv vitla

ಕಾಸರಗೋಡು: ಇವರಿಬ್ಬರು ಗೋವಾದಲ್ಲಿ ನಡೆಯಲಿರುವ ಐಎಸ್‌‌ಎಲ್ ಫುಟ್ಬಾಲ್ ಪೈನಲ್ ಪಂದ್ಯ ವೀಕ್ಷಿಸಲು ತೆರಳುತ್ತಿದ್ದರು. ಆದರೆ ವಿಧಿಯಾಟವೇ ಬೇರೆಯೇ ಆಗಿತ್ತು. ಬೈಕ್ ಹಾಗೂ ಲಾರಿ ನಡುವೆ ಉಂಟಾದ ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ಈ ದಾರುಣ ಘಟನೆ ಕಾಸರಗೋಡಿನ ಉದುಮ ಪಳ್ಳ ಎಂಬಲ್ಲಿ ನಡೆದಿದೆ. ಮೃತರನ್ನು ಮಲಪ್ಪುರಂನ ಜಂಶೀರ್ (22)ಮತ್ತು ಮುಹಮ್ಮದ್ ಶಿಬಿಲ್ ( 20) ಎಂದು ಗುರುತಿಸಲಾಗಿದೆ.

ಇಬ್ಬರು ಗೋವಾದಲ್ಲಿ ನಡೆಯಲಿರುವ ಐಎಸ್‌‌ಎಲ್ ಫುಟ್ಬಾಲ್ ಪೈನಲ್ ಪಂದ್ಯ ವೀಕ್ಷಿಸಲು ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಕಾಸರಗೋಡು ಕಡೆಯಿಂದ ತೆರಳುತ್ತಿದ್ದ ಲಾರಿ ಹಾಗೂ ಬೈಕ್ ನಡುವೆ ಅಪಘಾತ ನಡೆದಿದೆ. ಇಬ್ಬರು ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಮೃತ ದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವ ಗಾರದಲ್ಲಿರಿಸಲಾಗಿದೆ.

- Advertisement -

Related news

error: Content is protected !!