Tuesday, September 22, 2026
spot_imgspot_img
spot_imgspot_img

ಕಾಸರಗೋಡು: ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ; 15 ಮಂದಿಗೆ ಗಾಯ

- Advertisement -
- Advertisement -

ಕಾಸರಗೋಡು: ಖಾಸಗಿ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಚೆರ್ವತ್ತೂರು ಮಟ್ಟಲಾಯಿ ಟೆಕ್ನಿಕಲ್ ಶಾಲಾ ಸಮೀಪ ಬುಧವಾರ ಸಂಜೆ ನಡೆದಿದ್ದು,15 ಮಂದಿ ಗಾಯಗೊಂಡು ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ.

vtv vitla
vtv vitla

ಕಾಸರಗೋಡಿನಿಂದ ಕಣ್ಣೂರಿಗೆ ತೆರಳುತ್ತಿದ್ದ ಖಾಸಗಿ ಬಸ್ಸು ಅಪಘಾತಕ್ಕೀಡಾಗಿದ್ದು, ಧಾವಿಸಿ ಬಂದ ಪರಿಸರವಾಸಿಗಳು ಬಸ್ಸಿನಲ್ಲಿ ಸಿಲುಕಿದ್ದ ಗಾಯಾಳುಗಳನ್ನು ಹೊರತೆಗೆದು ಚೆರ್ವತ್ತೂರಿನ ಆಸ್ಪತ್ರೆಗೆ ತಲಪಿಸಿದರು.

ಇನ್ನು ಅಪಘಾತದ ಬಳಿಕ ಗಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ಥಗೊಂಡಿತ್ತು.

- Advertisement -

Related news

error: Content is protected !!