Saturday, June 6, 2026
spot_imgspot_img
spot_imgspot_img

ಕಾಸರಗೋಡು : ನಾಪತ್ತೆಯಾಗಿದ್ದ ವಿದ್ಯಾರ್ಥಿಯ ಮೃತದೇಹ ರೈಲ್ವೆ ಹಳಿಯಲ್ಲಿ ಪತ್ತೆ

- Advertisement -
- Advertisement -

ಕಾಸರಗೋಡು : ಪಲ್ಲಿಕ್ಕರದಲ್ಲಿ ಶೋಧ ಕಾರ್ಯಾಚರಣೆಯ ನಂತರ ಕಾಣೆಯಾದ ವಿದ್ಯಾರ್ಥಿ ಮೃತಪಟ್ಟ ರೀತಿಯಲ್ಲಿ ಪತ್ತೆಯಾಗಿದ್ದು, ಮೃತ ವಿದ್ಯಾರ್ಥಿಯನ್ನು ಪಲ್ಲಿಕ್ಕರ ಪೂಚಕ್ಕಾಡ್ ತೆಕ್ಕುಪುರಂ ನಿವಾಸಿ ಸುಬೈ‌ರ್‍ ಮತ್ತು ಸಮೀರಾ ದಂಪತಿಯ ಪುತ್ರ ಮುಹಮ್ಮದ್ ಶಹೀಮ್ (10) ಎಂದು ಗುರುತಿಸಲಾಗಿದೆ.

ಶಹೀಮ್ ಬುಧವಾರ ಮಧ್ಯಾಹ್ನ ಶಾಲೆಯಿಂದ ಬಂದವನು ನಂತರ ಕಾಣೆಯಾಗಿದ್ದಾನೆ. ಅವನು ಮನೆಗೆ ಹೋಗುತ್ತಿದ್ದೇನೆ ಎಂದು ಶಿಕ್ಷಕರಿಗೆ ತಿಳಿಸಿದನು ಎಂದು ತಿಳಿದುಬಂದಿದೆ. ಶಾಲಾ ಸಮಯದ ನಂತರವೂ ಅವನನ್ನು ನೋಡದ ಕಾರಣ ಕುಟುಂಬ ಸದಸ್ಯರು ವಿಚಾರಿಸಿದಾಗ, ಅವನು ಬೇಗನೆ ಶಾಲೆಯನ್ನು ತೊರೆದಿದ್ದಾನೆ ಎಂದು ತಿಳಿದುಬಂದಿದೆ, ನಂತರ ಸಂಬಂಧಿಕರು ಬೇಕಲ್‌ ಪೊಲೀಸರಿಗೆ ದೂರು ನೀಡಿದ್ದು, ವಿದ್ಯಾರ್ಥಿಗಾಗಿ ಹುಡುಕಾಟ ನಡೆಯುತಿತ್ತು, ಬಾಲಕನನ್ನು ಹುಡುಕಲು ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶಗಳನ್ನು ಸಹ ಪ್ರಸಾರ ಮಾಡಲಾಯಿತು.

ರಾತ್ರಿ 8 ಗಂಟೆ ಸುಮಾರಿಗೆ ಹಳಿಗಳ ಮೇಲೆ ರೈಲಿಗೆ ಡಿಕ್ಕಿ ಹೊಡೆದ ನಂತರ ಮೃತಪಟ್ಟ ರೀತಿಯಲ್ಲಿ ಬಾಲಕ ಮೃತದೇಹ ಪತ್ತೆಯಾಗಿದೆ. ಶಹೀಂ ಸಂಜೆಯವರೆಗೂ ಬೇಕಲ್ ಬೀಚ್ ಪಾರ್ಕ್ ನಲ್ಲಿ ಕಾಣಿಸಿಕೊಂಡಿದ್ದಾನೆ ಎಂದು ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!