Friday, March 29, 2024
spot_imgspot_img
spot_imgspot_img

ಕಾಸರಗೋಡು: ಬೈಕ್‌ಗೆ ಡಿಕ್ಕಿ ಹೊಡೆದು ಬೈಕ್‌ ಸವಾರನ ಕಿಡ್ನಾಪ್‌

- Advertisement -G L Acharya panikkar
- Advertisement -
vtv vitla

ಕಾಸರಗೋಡು: ಕಾಸರಗೋಡು-ಕಾಂಞಗಾಡು ಕೆಎಸ್‌ಟಿಪಿ ರಸ್ತೆಯ ಚಳಿಯಂಗೋಡು ಕೋಟರುವ ಎಂಬಲ್ಲಿ ಬೈಕ್‌ಗೆ ಕಾರು ಡಿಕ್ಕಿ ಹೊಡೆದು ಬೈಕ್‌ ಸವಾರನೊಬ್ಬನನ್ನು ಕಾರಿನಲ್ಲಿದ್ದ ಗ್ಯಾಂಗ್‌ ಅಪಹರಿಸಿದ ಘಟನೆ ವರದಿಯಾಗಿದೆ.

ಬೈಕ್ ಸವಾರ ಕಾಸರಗೋಡಿನಿಂದ ಮೇಲ್ಪರಂಬ ಕಡೆಗೆ ತೆರಳುತ್ತಿದ್ದರು. ಮಹಾರಾಷ್ಟ್ರ ನೋಂದಣಿ ಸಂಖ್ಯೆಯ ಕಾರು ಬೈಕ್ ಅನ್ನು ಸ್ವಲ್ಪ ದೂರ ಹಿಂಬಾಲಿಸಿ ನಂತರ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಬೈಕ್‌ನಿಂದ ಸವಾರ ಕೆಳಗೆ ಬೀಳುತ್ತಿದ್ದಂತೆ ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಅಪಹರಿಸಿದ್ದಾರೆ.

ಬೈಕ್ ಕುಂದಂಕುಳಿ ನಿವಾಸಿ ಯುವಕನಿಗೆ ಸೇರಿದ್ದು ಎಂದು ತಿಳಿದು ಬಂದಿದೆ. ಪೊಲೀಸರು ಬೈಕ್ ವಶಪಡಿಸಿಕೊಂಡಿದ್ದು ಕಿಡ್ನಾಪ್ ಮಾಡಿದ ಗ್ಯಾಂಗ್ ಅನ್ನು ಬಂಧಿಸುವಂತೆ ಎಲ್ಲಾ ಪೊಲೀಸ್ ಠಾಣೆಗಳಿಗೆ ಸಂದೇಶ ರವಾನಿಸಲಾಗಿದೆ.

- Advertisement -

Related news

error: Content is protected !!